Breaking Newsರಾಮನಗರ
ಕಟೀಲ್ ಆಡಿಯೋ ವಿಚಾರಕ್ಕೆ ಮಹತ್ವ ಬೇಡ: ಡಿಸಿಎಂ ಅಶ್ವತ್ಥನಾರಾಯಣ

ರಾಮನಗರ: ಆಡಿಯೋ ವಿಚಾರಕ್ಕೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಅಶ್ವತ್ಥನಾರಾಯಣ, ಆ ಆಡಿಯೋ ನನ್ನದಲ್ಲ ಎಂದು ನಳೀನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಆ ವಿಚಾರಕ್ಕೆ ಹೆಚ್ಚು ಮಹತ್ವ ಬೇಡ ಎಂದಿದ್ದಾರೆ.
ಅದೆಲ್ಲವೂ ಸಹ ವದಂತಿಗಳಾಗಿ ಹಬ್ಬಿದೆ. ಮುಂದಿನ 2 ವರ್ಷಗಳ ಕಾಲ ಯಡಿಯೂರಪ್ಪನವರೇ ಸಿಎಂ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಗೊಂದಲ, ಸಂಶಯ ಇಲ್ಲ ಎಂದರು.
ಜುಲೈ 26ರ ಔತಣಕೂಟದ ನಂತರ ಸಚಿವ ಸಂಪುಟ ಪುನಾರಚನೆ ವಿಚಾರ. ನಮ್ಮ ಸರ್ಕಾರದ ಸಾಧನೆ ಬಗ್ಗೆ ಸಂಭ್ರಮಾಚರಣೆ ನಡೆಯಲಿದೆ. ರಾಮನಗರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
