ಲೈಫ್ ಸ್ಟೈಲ್ಸೌಂದರ್ಯ

ರೇಷ್ಮೆಯಂಥ ಕೂದಲಿಗೆ ಹೀಗೆ ಮಾಡಿ

ಪವಿತ್ರಾ

ರೇಷ್ಮೆಯಷ್ಟು ನುಣುಪಾದ ಕೂದಲು ನಿಮ್ಮದಾಗಬೇಕೇ? ಈ ಕೆಲವು ಹೇರ್ ಪ್ಯಾಕ್ ಗಳನ್ನು ಹಾಕಿ ನೋಡಿ, ಕೆಲವೇ ವಾರಗಳಲ್ಲಿ ನಿಮ್ಮ ಕೂದಲು ಆಕರ್ಷಕವಾಗಿ ಹೊಳಪು ಪಡೆದುಕೊಳ್ಳುವುದು ನಿಶ್ಚಿತ.

ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಕಿವುಚಿ. ಅದಕ್ಕೆ ಎರಡು ಚಮಚ ದಪ್ಪನೆಯ ಕೆನೆ ಮತ್ತು ಒಂದು ಚಮಚ ಹಾಲು ಸೇರಿಸಿ. ಈ ಮಿಶ್ರಣವನ್ನು ತಲೆಗೆ ಹಾಗೂ ಕೂದಲಿಗೆ ಸಂಪೂರ್ಣವಾಗಿ ಹಚ್ಚಿ. ಒಂದು ಗಂಟೆ ಬಳಿಕ ಶ್ಯಾಂಪೂ ಬಳಸಿ ಸ್ನಾನ ಮಾಡಿ. ಇದರಿಂದ ನಿಮ್ಮ ಕೂದಲು ಬಲಪಡೆಯುತ್ತದೆ ಮಾತ್ರವಲ್ಲ ರೇಷ್ಮೆಯಷ್ಟು ನುಣುಪಾಗುತ್ತದೆ.

ಜೇನುತುಪ್ಪ ಹಾಗೂ ಕೆನೆಯ ಹೇರ್ ಮಾಸ್ಕ್ ಕೂಡಾ ಅತ್ಯುತ್ತಮ ಪರಿಣಾಮ ಬೀರುತ್ತದೆ. ಹಾಲಿನ ಕೆನೆಗೆ ಜೇನುತುಪ್ಪ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ. ಇದರಿಂದಲೂ ಕೂದಲು ಮೃದುಗೊಳ್ಳುತ್ತದೆ.

ಕೆನೆಗೆ ಎರಡು ಚಮಚ ತೆಂಗಿನ ಹಾಲು ಮತ್ತು ಎರಡು ಚಮಚ ಆಲಿವ್ ಆಯಿಲ್ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷಗಳ ಬಳಿಕ ಶಾಂಪೂವಿನಿಂದ ಕೂದಲು ತೊಳೆಯಿರಿ. ಇದರಿಂದ ನಿಮ್ಮ ಕೂದಲು ರೇಷ್ಮೆಯಷ್ಟು ನುಣುಪಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button