Latestಉತ್ತರ ಕನ್ನಡಕೃಷಿಜಿಲ್ಲಾ ಸುದ್ದಿವಿಶೇಷಸ್ಪೆಷಲ್ ಸ್ಟೋರೀಸ್

Arecanut Climbing: ಯಲ್ಲಾಪುರದಲ್ಲಿ ಸರಸರನೆ ಅಡಿಕೆ ಮರವೇರಿ ಕೊನೆಗೊಯ್ಯುವ ಬಾಲಕ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಅಡಿಕೆ ಕೊನೆ ಕೊಯ್ಯುವುದೆಂದರೆ ಅದೊಂದು ಸಾಹಸದ ಕೆಲಸವಾಗಿದೆ.ಸರಿಯಾದ ಸಮಯದಲ್ಲಿ ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲ ಎಂಬ ಗೋಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲಿ ಕೊನೆ ಗೌಡರು ಮಾಡುವ ಕಾರ್ಯವನ್ನು ತಾನೇ ಮಾಡಿದರೆ ಹೇಗೆ ಎಂದು ತಿಳಿದು ಇನ್ನು ಪೆನ್ನು ಹಿಡಿಯುವ ಈ ಬಾಲಕ ಸಚೇತ ತಾನೇ ಅಡಿಕೆ ಕೊಯ್ಯುವ ಕಾಯಕದಲ್ಲಿ ನಿರತನಾಗಿದ್ದಾನೆ.‌ ಈ ಸಾಹಸಿ ಪೋರನಿಗೆ ಕೇವಲ 13 ವರ್ಷ ವಯಸ್ಸು ಎಂದರೆ ನೀವು ನಂಬಲೇಬೇಕು.

ಮನೆಯಲ್ಲಿ ದೊಡ್ಡವರು ಅಡಿಕೆ ಕೊನೆ ಕೊಯ್ಯುವ ವೇಳೆಯಲ್ಲಿ ಕಷ್ಟ ಪಡುವುದನ್ನು ನೋಡಲಾಗದೇ ಸಚೇತ ಹೆಗಡೆ ಈ ಕಾರ್ಯಕ್ಕೆ ಮುಂದಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಬಾಲಕ ಕೊನೆ ಗೌಡರಿಗೆ ಸವಾಲು ಒಡ್ಡಿ ತಾನೇನು ಕಮ್ಮಿಯಿಲ್ಲ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾನೆ.

ಯಲ್ಲಾಪುರ ತಾಲೂಕಿನ ಉಮ್ಮಚಗಿ ಜಾಜಿ ಮನೆಯ ಸಚೇತ ದಿವಸ್ಪತಿ ಹೆಗಡೆ 7 ನೇ ತರಗತಿಯಲ್ಲಿ ಓದುತ್ತಿದ್ದು,ಜಾಜಿಮನೆಯ ಜಾಜಿ ಮಾಸ್ತರ ಮೊಮ್ಮಗನಾಗಿದ್ದಾನೆ. ಈತನ ತಂದೆ ದಿವಸ್ಪತಿ ಹೆಗಡೆ,ತಾಯಿ ಶ್ವೇತಾ ಹೆಗಡೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ತಮ್ಮ ತೋಟದಲ್ಲಿ ಅಡಿಕೆ ಕೊಯ್ಯುವ ವೇಳೆಯಲ್ಲಿ ತಾನು ಅಡಿಕೆ ಹಿಡಿಯುವ ಕಾಯಕಕ್ಕೆ ಹೋಗುತ್ತಿದ್ದ. ಅಡಿಕೆ ಕೊಯ್ಯುವ ಕೊನೆಗೌಡ ಯಾವ ರೀತಿಯಾಗಿ ಕೊನೆ ಕೊಯ್ಯುತ್ತಾನೆ ಎಂಬುದನ್ನು ಕೂಲಕುಂಶವಾಗಿ ಗಮನಿಸುತ್ತಿದ್ದ.

ಕಳೆದ ಎರಡು ವರ್ಷಗಳಿಂದ ಕೊನೆ ಗೌಡನನ್ನು ಕರೆ ತರುವುದು ಬಹಳ ಕಷ್ಟಕರವಾಗಿತ್ತು. ಪ್ರತಿಯೊಂದನ್ನು ಬೇರೆಯವರಿಗೆ ಅವಲಂಭಿಸಿಕೊಂಡರೆ ನಮ್ಮ ಕಾರ್ಯ ಹಾಳಾಗುತ್ತದೆ ಎಂದು ತಿಳಿದ ಈ ಬಾಲಕ ಸ್ವತಃ ತಾನೇ ಮರ ಹತ್ತುವ ಕಾಯಕವನ್ನು ರೂಢಿಸಿಕೊಂಡು ಸಫಲನಾದ. ಪ್ರಬುದ್ಧ ಕೊನೆ ಗೌಡನಿಗೂ ಸರಿ ಸಾಟಿ ಎನ್ನುವಂತೆ ಮುಗಿಲೆತ್ತರದ ಅಡಿಕೆ ಮರವನ್ನು ಸರಸರನೆ ಏರುವ ಈತ ಸ್ವಲ್ಪವೂ ಅಂಜಿಕೆಯಿಲ್ಲದೇ ಅಡಿಕೆ ಕೊನೆಗಳನ್ನು ಕೊಯ್ಯುತ್ತಾನೆ. ಈತನ ಸಾಹಸ ಪ್ರವೃತ್ತಿ ಈಗ ಎಲ್ಲೆಡೆ ಮೆಚ್ಚುಗೆಯಾಗಿದೆ. ಜೊತೆಗೆ ಸ್ವಾವಲಂಬಿ ರೈತರ ಬದುಕಿಗೆ ಈತ ಮುನ್ನುಡಿ ಬರೆದಿದ್ದಾನೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button