Latestಕೊಡಗುಕ್ರೀಡೆಜಿಲ್ಲಾ ಸುದ್ದಿ

ಪದ್ಮಶ್ರೀ ವಿಜೇತ ಪೂವಯ್ಯರಿಗೆ ಸುಂಟಿಕೊಪ್ಪದಲ್ಲಿ ಆತ್ಮೀಯ ಸ್ವಾಗತ

ಕೊಡಗು : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ  ಒಂಪಿಯನ್ ಸುಂಟಿಕೊಪ್ಪ ಸಮೀಪದ ಅಂದಗೋವೆಯ ನಿವಾಸಿ ಮೊಳ್ಳೇರ ಪೂವಯ್ಯ ಗಣೇಶ್ ಅವರಿಗೆ ಸುಂಟಿಕೊಪ್ಪದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಹಿರಿಯ ಹಾಕಿ ಆಟಗಾರ ಗಣೇಶ್ ಅಯ್ಯಪ್ಪಸ್ವಾಮಿ ದೇಗುಲದ ಬಳಿ ಪೂವಯ್ಯರನ್ನುಸ್ವಾಗತಿಸಿ ಕನ್ನಡ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತಂದು  ಮಾಲಾರ್ಪಣೆ ಮಾಡಿ ಗೌರವಿಸಿದರು. 

ಸುಂಟಿಕೊಪ್ಪ  ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಿ.ಡಿ.ಓ. ವೇಣುಗೋಪಾಲ್, ಹಿರಿಯರಾದ ಎಂ.ಎ. ವಸಂತ, ಕೆ.ಪಿ. ಜಗನ್ನಾಥ್, ಅಂತರಾಷ್ಟ್ರೀಯ ಹಾಕಿ ಆಟಗಾರ ಲೆನ್ ಅಯ್ಯಪ್ಪ, ಒಲಂಪಿಯನ್ ಸಿ.ಎಸ್. ಪೂಣಚ್ಚ, ಅಂತರಾಷ್ಟ್ರೀಯ ತೀರ್ಪುಗಾರ ಅಚ್ಚಕಾಳಿರ ಪಳಂಗಪ್ಪ, ರಾಜ್ಯ ವೀಕ್ಷಕ ವಿವರಣೆಗಾರ  ಸಿ.ಎ. ಕಾರ್ಯಪ್ಪ, ಸಾಯಿ ತರಬೇತಿದಾರ ಜಗ್ಗರಂಡ ಅಪ್ಪಚ್ಚು ಗ್ರಾಮಪಂಚಾಯಿತಿ ಸದಸ್ಯರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button