Breaking NewsLatestಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರ
ಯುಕ್ರೇನ್ ನಿಂದ ಬಂದ ಮಗಳಿಗೆ ತಿರುಪತಿ ಲಡ್ಡು; ಸ್ವಾಗತ ಕೋರಿದ ಪೋಷಕರು

ದೇವನಹಳ್ಳಿ:ರಷ್ಯಾ ಮತ್ತು ಯುಕ್ರೇನ್ನ ಯುದ್ಧಭೂಮಿಯಿಂದ ತವರಿಗೆ ವಾಪಸ್ಸಾದ ಮಗಳಿಗೆ
ಯಲಹಂಕದ ಸಂಪತ್ ವೇಣುಗೋಪಾಲ ಆಚಾರ್ಯ ಅವರ ಕುಟುಂಬ ಮಗಳಿಗೆ ಒಳಿತಾಗಲಿ ಕ್ಷೇಮವಾಗಿ ಮನೆಗೆ ಬರಲಿ ಎಂದು ಪೂಜೆ ಮಾಡಿಸಿ ಯುಕ್ರೇನ್ ನಿಂದ ಬಂದ ಮಗಳಿಗಾಗಿ ಪ್ರಸಾದ ತೆಗೆದುಕೊಂಡು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಮಗಳನ್ನು ಬರಮಾಡಿಕೊಂಡರು. ತಿರುಪತಿ ಲಡ್ಡು, ಮಂತ್ರಾಲಯದ ಸಿಹಿ ತಿನಿಸಿ, ಆನಂದಭಾಷ್ಪಗಳ ಮೂಲಕ ಭಾವುಕರಾಗಿ ಪೋಷಕರು ಮಗಳಿಗೆ ಸ್ವಾಗತ ಕೋರಿದರು.
ಯುಕ್ರೇನ್ ನಿಂದ ತವರಿಗೆ ವಾಪಸ್ಸಾಗುತ್ತೇವೆ ಎಂಬ ವಿಶ್ವಾಸ ಇರಲಿಲ್ಲ. ಅಕ್ಕಪಕ್ಕದಲ್ಲೆ ಬಾಂಬ್, ಶೆಲ್ಗಳ ಸೌಂಡ್ ಕಿವಿಗೆ ಬಡಿಯುತ್ತಿತ್ತು ಎಂದು ಯುಕ್ರೇನ್ ನಿಂದ ಬಂದ ಯಲಹಂಕದ ಸ್ವರ್ಣ ಅಲ್ಲಿನ ಪರಿಸ್ಥಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.
