Breaking NewsLatestರಾಷ್ಟ್ರೀಯಸುದ್ದಿ

Air India: ಟಾಟಾ ಸಮೂಹಕ್ಕೆ ಏರ್​ ಇಂಡಿಯಾ ಹಸ್ತಾಂತರ

ನವದೆಹಲಿ : ಟಾಟಾ ಒಡೆತನದಿಂದ ಬೇರೆಡೆ ಹಾರಿ, ಬಳಲಿ ಬೆಂಡಾದ ಏರ್ ಇಂಡಿಯಾ ವಿಮಾನ, ಇಂದು ಮತ್ತೆ ಟಾಟಾ ಅಂಗಳಕ್ಕೆ ಬಂದಿದೆ. ಈ ಹಿಂದೆ ಬಿಡ್‌ನಲ್ಲಿ ಏರ್ ಇಂಡಿಯಾ ವಿಮಾನವನ್ನು ಟಾಟಾ ಸಂಸ್ಥೆ ಖರೀದಿಸಿತ್ತು. ಇದೀಗ ಏರ್ ಇಂಡಿಯಾ ಅಧಿಕೃತವಾಗಿ ಟಾಟಾ ಸಮೂಹ ಸಂಸ್ಥೆಗಳ ಮಾಲೀಕತ್ವಕ್ಕೆ ಸೇರ್ಪಡೆಯಾಗಿದೆ.

ಜನವರಿ 27ರಂದು ಏರ್ ಇಂಡಿಯಾ ಮಾಲೀಕತ್ವವು ಟಾಟಾ ಸಂಸ್ಥೆಯ ಕೈ ಸೇರಿದೆ. ಟಾಟಾ ಸಮೂಹಗಳ ಅಂಗ ಸಂಸ್ಥೆಯಾದ ಟೆಲೆಸ್‌ ಪ್ರೈವೇಟ್‌ ಲಿಮಿಟೆಡ್‌ ಈಗಾಗಲೇ ಏರ್ ಇಂಡಿಯಾ ಮಾಲೀಕತ್ವವನ್ನು ಖರೀದಿಸಿದೆ. ಕಳೆದ ವರ್ಷ ಅಕ್ಟೋಬರ್​ 8 ರಂದು ಕೇಂದ್ರ ಸರ್ಕಾರ ನಡೆಸಿದ ಬಿಡ್​​ ನಲ್ಲಿ ಏರ್ ಇಂಡಿಯಾ 18 ಸಾವಿರ ಕೋಟಿಗೆ ಟಾಟಾ ಸನ್ಸ್​​ ಖರೀದಿಸಿದೆ.

ಏರ್ ಇಂಡಿಯಾ ಜನ್ಮ ತಳೆದಿದ್ದೇ ಟಾಟಾ ಸಂಸ್ಥೆಯಲ್ಲಿ 15 ಅಕ್ಟೋಬರ್ 1932 ಜನ್ಮ ತಳೆದಿತ್ತು. ಟಾಟಾ ಏರ್‌ಲೈನ್ಸ್ ಅಂತ ನಾಮಕರಣಗೊಂಡಿದ್ದನ್ನು ನಂತರ ಏರ್ ಇಂಡಿಯಾ ಇಂಟರ್‌ನ್ಯಾಷನಲ್ ಆಗಿ ಬದಲಾಯಿತು. ಬಳಿಕ ಇದರ ಹೆಸರು 1953ರಲ್ಲಿ ಏರ್ ಇಂಡಿಯಾ ಎಂದುದು ಬದಲಾಯಿತು. ಆ ಹೊತ್ತಿಗೆ ಏರ್ ಇಂಡಿಯಾವು ಕೇಂದ್ರ ಸರ್ಕಾರದ ಒಡೆತನಕ್ಕೆ ಒಳಪಟ್ಟಿತು. ಇದೀಗ ಬರೋಬ್ಬರಿ 69 ವರ್ಷಗಳ ಬಳಿಕ ಏರ್ ಇಂಡಿಯಾ ಟಾಟಾ ಸಂಸ್ಥೆಯ ತೆಕ್ಕೆಗೆ ಸೇರಿತು.

ಏರ್ ಇಂಡಿಯಾ ಮೇಲೆ ಒಟ್ಟು 61,562 ಕೋಟಿ ಸಾಲದ ಹೊರೆಯಿದ್ದು, ಇದರಲ್ಲಿ 15,300 ಕೋಟಿ ಸಾಲವನ್ನು ಟಾಟಾ ಸಂಸ್ಥೆ ಹೊರಬೇಕಾಗುತ್ತದೆ. ಶೇ. 100ರಷ್ಟು ಷೇರುಗಳೊಂದಿಗೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್​ಪ್ರೆಸ್ ಮತ್ತು ಶೇ.50 ಷೇರು ಹೊಂದಿದ್ದ ಏರ್ ಇಂಡಿಯಾ ಸ್ಯಾಟ್ಸ್ ಏರ್​ಪೋರ್ಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಇವು ಟಾಟಾ ಒಡೆತನಕ್ಕೆ ಬಂದಿವೆ.

Spread the love

Related Articles

Leave a Reply

Your email address will not be published. Required fields are marked *

Back to top button