ಮನರಂಜನೆಸಿನಿಮಾಸೆಲೆಬ್ರಿಟಿ

ಪುನೀತ್ ಹುಟ್ಟುಹಬ್ಬಕ್ಕೆ ಜೇಮ್ಸ್ ರಿಲೀಸ್?

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್​ಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಅದರಲ್ಲೂ ನಿನ್ನೆ ರಿಲೀಸ್ ಆಗಿರೋ ಚಿತ್ರದ ಪೋಸ್ಟರ್ ನೋಡಿದ ಬಳಿಕ ಚಿತ್ರ ಯಾವಾಗಪ್ಪ ರಿಲೀಸ್ ಆಗುತ್ತೆ, ಪುನೀತ್​​ರನ್ನ ಯಾವಾಗ ನೋಡ್ತೀವಿ ಅಂತಿದ್ದಾರೆ. ಇದೀಗ ಅದಕ್ಕೆ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಉತ್ತರ ನೀಡಿದ್ದಾರೆ.

ನಟ ಪುನೀತ್ ರಾಜ್​ಕುಮಾರ್ ಹಾಗೂ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾದ ಮೇಲೆ ಸಾಕಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಇದು ಪುನೀತ್ ನಟನೆಯ ಕೊನೆಯ ಸಿನಿಮಾ ಅನ್ನೋದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಇದೇ ಮೊದಲ ಭಾರಿಗೆ ಪುನೀತ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ನೋಡೋಕೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕೂತಿದ್ದಾರೆ.

ಜೇಮ್ಸ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು ಫೆಬ್ರವರಿ ಅಂತ್ಯದಲ್ಲಿ ಚಿತ್ರದ ಕೆಲಸಗಳು ಕಂಪ್ಲೀಟ್ ಆಗಲಿವೆಯಂತೆ. ಹೀಗಾಗಿ ಮಾರ್ಚ್ 17ರಂದು ಪುನೀತ್ ರಾಜ್​ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾ ರಿಲೀಸ್ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ. ಪುನೀತ್ ರಾಜ್​ಕುಮಾರ್ ಬದುಕಿದ್ದಾಗಲೇ ಚಿತ್ರವನ್ನ ಮಾರ್ಚ್​​ 17ರಂದು ರಿಲೀಸ್ ಮಾಡೋಕೆ ಪ್ಲಾನ್ ಮಾಡಿಕೊಂಡಿದ್ದರಂತೆ. ಹೀಗಾಗಿ ಕೊವಿಡ್ ಹಾಗೂ ಕೊರೊನಾ ನಿಯಮಾವಳಿಗಳು ಕಡಿಮೆಯಾದರೆ ಮಾರ್ಚ್​ 17ರಂದೇ ಸಿನಿಮಾವನ್ನ ರಿಲೀಸ್ ಮಾಡಲಾಗುತ್ತಂತೆ.

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಕೂಡ ಮಾರ್ಚ್​ 18ರಂದು ರಿಲೀಸ್ ಆಗೋ ಸಾಧ್ಯತೆ ಇದೆ. ಈ ಬಗ್ಗೆ ರಾಜಮೌಳಿ ಬಳಿ ಒಮ್ಮೆ ಮಾತುಕತೆ ನಡೆಸೋದಾಗಿ ತಿಳಿಸಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಾವು ಮೊದಲಿನಿಂದಲೂ ಇದೇ ದಿನಾಂವನ್ನ ನಿರ್ಧರಿಸಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಅಂದೇ ಸಿನಿಮಾ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button