Breaking NewsLatestವಿದೇಶ

ಉತ್ತರ ಕೊರಿಯಾದಿಂದ ಇನ್ನೊಂದು ಶಂಕಿತ ಕ್ಷಿಪಣಿ ಉಡಾವಣೆ

ಸಿಯೋಲ್ (ದಕ್ಷಿಣ ಕೋರಿಯಾ) ಉತ್ತರ ಕೊರಿಯಾ ಹೈಪರ್ ಸಾನಿಕ್ ಶಂಕಿತ ಕ್ಷಿಪಣೆಯನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಇದು ಖಂಡಾಂತರ ಕ್ಷಿಪಣಿಯೇ ಎಂಬುದು ದೃಢವಾಗಿಲ್ಲ ಎಂದು ದಕ್ಷಿಣ ಕೊರಿಯಾ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕೊರಿಯಾ ಶುಕ್ರವಾರ ರೈಲ್ ಕಾರ್ ನಿಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳೆಂದು ಭಾವಿಸಲಾದ ಪರೀಕ್ಷೆಯನ್ನು ನಡೆಸಿತ್ತು ಎಂದು ಮಾಧ್ಯಮಗಳು ತಿಳಿಸಿದ್ದವು. ಇದರ ಬೆನ್ನಲ್ಲೇ ಈ ತಿಂಗಳಲ್ಲಿ ಉತ್ತರ ಕೊರಿಯಾ ನಡೆಸಿದ ಆರನೇ ಉಡಾವಣೆ ಇದು ಎಂದು ಹೇಳಲಾಗಿದೆ.

ಉತ್ತರ ಕೊರಿಯಾದೊಂದಿಗೆ ಸುದೀರ್ಘ ಮಾತುಕತೆ ನಂತರ ಅಮೆರಿಕಾದ ಅಧ್ಯಕ್ಷ ಬೈಡನ್ ಆಡಳಿತದ ಮೇಲೆ ಒತ್ತಡ ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಇತ್ತೀಚೆಗೆ ತನ್ನ ಪರೀಕ್ಷಾ ಚಟುವಟಿಕೆ ಹೆಚ್ಚಿಸಿದೆ.

ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಮೇಲೆ ಅಮೆರಿಕಾ ನಿರ್ಬಂಧ ಹೇರಿದೆ. ಇದರ ನಡುವೆಯೇ ಉತ್ತರ ಕೋರಿಯಾ ಕ್ಷಿಪಣಿ ಪ್ರಯೋಗಗಳನ್ನು ಹೆಚ್ಚಿಸಿದೆ. ಕೋವಿಡ್ ಸಾಂಕ್ರಮಿಕದ ಪರಿಣಾಮ ಹಾಗೂ ಅದಕ್ಷ ಆಡಳಿತದಿಂದ ಈಗಾಗಲೇ ದೇಶ ಜರ್ಝರಿತಗೊಂಡಿದೆ.

ಇದರ ಮಧ್ಯೆಯೇ ಅಮೆರಿಕಾವನ್ನು ಗುರಿಯಾಗಿಸಿಕೊಂಡು ಪರಮಾಣು ಸ್ಪೋಟಕಗಳು ಮತ್ತು ದೀರ್ಘ ಶ್ರೇಣಿಯ ಕ್ಷಿಪಣಿಗಳ ಪ್ರಕ್ರಿಯೆಯನ್ನು ಉತ್ತರ ಕೋರಿಯಾ ತೀವ್ರಗೊಳಿಸಿದೆ. ಉತ್ತರ ಕೊರಿಯಾಕ್ಕೆ ಚೀನಾ ಬೆಂಬಲವಿದೆ.

Spread the love

Related Articles

Leave a Reply

Your email address will not be published. Required fields are marked *

Back to top button