Breaking NewsLatestರಾಜ್ಯಸುದ್ದಿ
ರಾಜ್ಯ ಬಜೆಟ್ ನಲ್ಲಿ ಶಕ್ತಿಧಾಮಕ್ಕೆ ವಿಶೇಷ ನೆರವು

ಪುನೀತ್ ರಾಜ್ ಕುಮಾರ್ ಮೈಸೂರು ಶಕ್ತಿಧಾಮ ಮಕ್ಕಳ ಬಾಳಿಗೆ ಆಸರೆ ಆಗಿದ್ದರು. ಅವರ ನಿಧನದಿಂದ ಶಕ್ತಿಧಾಮ ಸಂಸ್ಥೆಗೆ ಅಪಾರ ನಷ್ಟವಾಗಿತ್ತು. ಪುನೀತ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಶಕ್ತಿಧಾಮ ಆಶ್ರಮದ ಜವಾಬ್ದಾರಿಯನ್ನು ಗೀತಾ ಶಿವರಾಜ್ಕುಮಾರ್ ಹೊತ್ತುಕೊಂಡಿದ್ದಾರೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್ ಕುಮಾರ್ ಕನಸಿಗೆ ಶಕ್ತಿ ತುಂಬಲು ಹೊರಟಿದ್ದಾರೆ
1998ರಲ್ಲಿ ಮೈಸೂರಿನ ಪೊಲೀಸ್ ಕಮೀಷನರ್ ಆಗಿದ್ದ ಕೆಂಪಯ್ಯ ಮತ್ತು ಡಾ.ರಾಜಕುಮಾರ್ ಅವರ ಪ್ರಯತ್ನದಿಂದ ಶಕ್ತಿಧಾಮ ನಿರ್ಮಾಣಗೊಂಡಿತ್ತು. ಸಾಮಾಜಿಕ ಸೇವಾ ವಲಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಈ ಹಿನ್ನೆಲೆ ಇಂದು ರಾಜ್ಯ ಬಜೆಟ್ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಕ್ತಿಧಾಮಕ್ಕೆ ವಿಶೇಷ ನೆರವುವನ್ನು ಘೋಷಣೆ ಮಾಡಿದ್ದಾರೆ.
