ಶಾಕುಂತಲೆಯಾದ ಸಮಂತ: ಫಸ್ಟ್ ಲುಕ್ಗೆ ಕ್ಲೀನ್ ಬೋಲ್ಡ್ ಆದ ಅಭಿಮಾನಿಗಳು

ನಾಗಚೈತನ್ಯರಿಂದ ದೂರವಾದ ಬಳಿಕ ನಟಿ ಸಮಂತ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊದರಂತೆ ಸಿನಿಮಾಗಳನ್ನ ತೊಡಗಿಕೊಂಡಿರುವ ಸಮಂತಾಗೆ ಪರಭಾಷೆಯಿಂದಲು ಸಾಕಷ್ಟು ಆಫರ್ ಬರ್ತಿದೆ. ಈ ಮಧ್ಯೆ ಸಮಂತಾ ನಟನೆಯ ಶಾಕುಂತಲಂ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಟಾಲಿವುಡ್ ಚಿತ್ರರಂಗದಲ್ಲಿ ಐತಿಹಾಸಿಕ ಕಥಾ ಹಂದರ ಹೊಂದಿರುವ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಮಂತಾ ಲುಕ್ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಶ್ವೇತವರ್ಣದ ಸೀರೆಯಲ್ಲಿ, ಹಸಿರು ಬನದ ನಡುವೆ ಕುಳಿತ ಸಮಂತಾ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಪಕ್ಕದಲ್ಲಿರೋ ಜಿಂಕೆ, ಮೊಲ ಹಾಗೂ ನವಿಲುಗಳು ಆಕೆಯ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸಿವೆ. ಸದ್ಯ ರಿಲೀಸ್ ಆಗಿರೋ ಶಾಕುಂತಲಂ ಚಿತ್ರದ ಫಸ್ಟ್ ಲುಕ್ನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಚಿತ್ರದ ಮೇಲೆ ಸಮಂತಾಗೆ ವಿಶೇಷವಾದ ನಿರೀಕ್ಷೆ ಇದೆ.
ಶಾಕುಂತಲಂ ಚಿತ್ರದ ಫಸ್ಟ್ ಲುಕ್ ರಿಲೀಸ್ ಆದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಾಂತರ ಮಂದಿ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಸಾಕಷ್ಟು ಸೆಲೆಬ್ರಿಟಿಗಳು ಚಿತ್ರದ ಫೋಸ್ಟರ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾಗೆ ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. ತೆಲುಗಿನ ಜೊತೆಗೆ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲೂ ಸಿನಿಮಾ ಮೂಡಿ ಬರ್ತಿದೆ. ವಿಶೇಷ ಅಂದ್ರೆ ಶಾಕುಂತಲಂ ಚಿತ್ರದಲ್ಲಿ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಬಣ್ಣ ಹಚ್ಚಿದ್ದಾಳೆ.



