ರೆಕಾರ್ಡ್ ಬ್ರೇಕ್ ಮಾಡಿದ ಜೇಮ್ಸ್ ಟೀಸರ್

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ರಿಲೀಸ್ ಆಗ್ತಿದ್ದು ಚಿತ್ರ ನೋಡೋಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ಚಿತ್ರತಂಡ ಟೀಸರ್ ರಿಲೀಸ್ ಮಾಡಿದ್ದು ಟೀಸರ್ ನೋಡಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಬಹು ನಿರೀಕ್ಷಿತ ಜೇಮ್ಸ್ ಟೀಸರ್ ರಿಲೀಸ್ ಆಗಿದೆ. ಪುನೀತ್ ರಾಜ್ಕುಮಾರ್ರ ಖಡಕ್ ಎಂಟ್ರಿ, ಪವರ್ ಫುಲ್ ಡೈಲಾಗ್, ಆಕ್ಷನ್ ಸೀನ್ಗಳಿಂದ ಜೇಮ್ಸ್ ಅಭಿಮಾನಿಗಳ ಮನ ತಣಿಸಿದೆ. ಸದ್ಯ ಜೇಮ್ಸ್ ಟೀಸರ್ ರಿಲೀಸ್ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಟೀಸರ್ನ ಕೊನೆಯಲ್ಲಿ ಶಿವಣ್ಣನ ದ್ವನಿಯಲ್ಲಿ ಪವರ್ ಫುಲ್ ಡೈಲಾಗ್ ಕೇಳಿ ಬಂದಿದೆ. ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಅನ್ನೋ ಡೈಲಾಗ್ ಅದು. ಚಿತ್ರದ ಡೈಲಾಗ್ನಂತೆಯೇ ಟೀಸರ್ನಲ್ಲೂ ಪವರ್ ಸ್ಟಾರ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಟೀಸರ್ ರಿಲೀಸ್ ಆದ ಐದು ಘಟೆಯಲ್ಲಿ 3 ಮಿಲಿಯನ್ಗೂ ಅಧಿಕ ವೀವ್ಸ್ ಬಂದಿದ್ದು ಸಾಕಷ್ಟು ಮಂದಿ ಟೀಸರ್ ಮೆಚ್ಚಿಕೊಂಡಿದ್ದಾರೆ.



