ಜೇಮ್ಸ್ ಟೀಸರ್ ರಿಲೀಸ್ ಹಿನ್ನೆಲೆ ಸಿದ್ದಾರೂಢ ಮಠದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಈಗಾಗಲೇ ಮೂರು ತಿಂಗಳು ಕಳೆದಿದೆ. ಅಪ್ಪು ಅಭಿನಯದ ಬಹುನಿರೀಕ್ಷಿತ ಹಾಗೂ ಕೊನೆಯ ಚಿತ್ರ ಜೆಮ್ಸ್ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು ಅಪ್ಪು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣವನ್ನು ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ ನೆಚ್ಚಿನ ಮಠವಾಗಿದ್ದ ಶ್ರೀ ಸಿದ್ದಾರೂಢರ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಿತ್ರದ ಯಶಸ್ವಿಗೆ ಪ್ರಾರ್ಥನೆ ಸಲ್ಲಿಸಿದರು.
ಪುನೀತ್ ರಾಜಕುಮಾರ ಹಾಗೂ ರಾಜ್‌ವಂಶದ ಅಭಿಮಾನಿ ರಘ ವದ್ದಿ ಅವರ ನೇತೃತ್ವದಲ್ಲಿ, ನಗರದ ಹಳೇ ಹುಬ್ಬಳ್ಳಿಯ ಶ್ರೀ ಸಿದ್ದಾರೂಢರ ಮಠ ಸನ್ನಿಧಾನದಲ್ಲಿ ಲ್ಯಾಪ್ಟಾಪ್ನಲ್ಲಿ ಚಿತ್ರದ ಟೀಸರ್ ಪ್ಲೇ ಮಾಡಿ, ಶ್ರೀ ಸಿದ್ದಾರೂಢರಿಗೆ ಅರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿ ಅಪ್ಪು ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಇನ್ನೂ ಇದೇ ವೇಳೆ ಮಾತನಾಡಿದ ಅಪ್ಪು ಅಭಿಮಾನಿ ರಘ ವದ್ದಿ, ಜೆಮ್ಸ ಚಿತ್ರದ ಟೀಸರ್ ಅಪ್ಪು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಹುಟ್ಟು ಹಾಕಿದೆ. ಅವರು ಕೊನೆಯದಾಗಿ ನಟಿಸಿರುವ ಚಿತ್ರ ಜೆಮ್ಸ್ ಆಗಿದ್ದು, ಅವರನ್ನು ಚಿತ್ರ ಮಂದಿರದಲ್ಲಿ ಕಣ್ಣು ತುಂಬಿಕೊಳ್ಳಲು ದೇವರು ನಮ್ಮಗೆ ಅವಕಾಶ ನೀಡಿದ್ದಾನೆ. ಜೆಮ್ಸ್ ಚಿತ್ರ ಮಾರ್ಚ್ 17ರಂದು ಬಿಡುಗಡೆ ಆಗಲಿದ್ದು, ನಾವೆಲ್ಲರೂ ಕೂಡಿಕೊಂಡು ಚಿತ್ರ ಮಂದಿರದಲ್ಲಿಯೇ ನೋಡೋಣ, ಯಾರೂ ಕೂಡಾ ಅನ್ಯ ಮಾರ್ಗದಲ್ಲಿ ಚಿತ್ರ ವೀಕ್ಷಣೆ ಮಾಡಬಾರದು ಎಂದು ಕೇಳಿಕೊಂಡರು.




