ಜಗತ್ತಿನ ಅನೇಕ ಜನರಿಗೆ ಸ್ಫೂರ್ತಿಯಾಗಿರೋ ನೀವು ಭಾರತಕ್ಕೆ ಬನ್ನಿ: ಕಮಲಾ ಹ್ಯಾರಿಸ್‌ಗೆ ಪ್ರಧಾನಿ ಮೋದಿ ಆಹ್ವಾನ

ಯುಎಸ್ಎ: ಅಮೇರಿಕಕ್ಕೆ ಮೂರು ದಿನಗಳ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿ ಭಾರತ ಮತ್ತು ಅಮೆರಿಕವನ್ನು ನೈಸರ್ಗಿಕ ಪಾಲುದಾರರು ಎಂದು ಬಣ್ಣಿಸಿದರು. ಈ ಸಭೆಯಲ್ಲಿ, ಇಬ್ಬರೂ ನಾಯಕರು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಒತ್ತು ನೀಡಿದರು ಮತ್ತು ಪರಸ್ಪರ ಮತ್ತು ಜಾಗತಿಕ ಹಿತಾಸಕ್ತಿಗಳ ಕುರಿತು ಚರ್ಚಿಸಿದರು.
ಪಿಎಂ ಮೋದಿ ಮತ್ತು ಕಮಲಾ ಹ್ಯಾರಿಸ್ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ ಭಾರತ ಮತ್ತು ಯುಎಸ್ ನೈಸರ್ಗಿಕ ಪಾಲುದಾರರು. ನಾವು ಸಾಮಾನ್ಯ ಮೌಲ್ಯಗಳು, ಭೌಗೋಳಿಕ ರಾಜಕೀಯ ಹಿತಾಸಕ್ತಿಗಳನ್ನು ಹೊಂದಿದ್ದೇವೆ. ಭಾರತ ಮತ್ತು ಅಮೇರಿಕಾಗಳು ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವಗಳು, ಎರಡೂ ದೇಶಗಳು ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ ಮತ್ತು ಅವುಗಳ ಸಹಕಾರವೂ ಕ್ರಮೇಣ ಹೆಚ್ಚುತ್ತಿದೆ ಎಂದರು.
ಈ ಸಭೆಯಲ್ಲಿ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ದ್ವಿಪಕ್ಷೀಯ ಸಂಬಂಧಗಳು ಇನ್ನಷ್ಟು ಎತ್ತರಕ್ಕೆ ತಲುಪಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ಉಪ ರಾಷ್ಟ್ರಪತಿ ಕಮಲಾ ಹ್ಯಾರಿಸ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಮೋದಿ ಹ್ಯಾರಿಸ್‌ಗೆ, “ನೀವು ಜಗತ್ತಿನ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದೀರಿ ಎಂದು ಹೊಗಳಿದರು.
