Latestರಾಜಕೀಯರಾಜ್ಯ

ಸಂಪುಟದಲ್ಲಿ 13 ಜಿಲ್ಲೆಗಳಿಗಿಲ್ಲ ಪ್ರಾತಿನಿಧ್ಯ; ಬೆಂಗಳೂರು ನಗರಕ್ಕೆ ಸಿಂಹಪಾಲು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ 29 ಶಾಸಕರಿಗೆ ಸಚಿವ ಸ್ಥಾನ ದೊರೆತಿದ್ದು, 8 ಲಿಂಗಾಯತರು, 7 ಒಕ್ಕಲಿಗರು, 7 ಓಬಿಸಿ, 3 ದಲಿತರು, 2 ಬ್ರಾಹ್ಮಣರು, 1 ಎಸ್​ಟಿ, ಓರ್ವ ಮಹಿಳೆಗೆ ಪ್ರಾತಿನಿಧ್ಯ ದೊರೆತಿದೆ.

13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲವಾಗಿದೆ. ಬೆಂಗಳೂರು ಗ್ರಾಮಾಂತರ, ಯಾದಗಿರಿ, ದಾವಣಗೆರೆ ಬಿಜಾಪುರ ರಾಮನಗರ, ಮೈಸೂರು ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಗುಲ್ಬರ್ಗಾ, ಹಾಸನ, ಕೋಲಾರ, ರಾಯಚೂರು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ.

ಇದೇ ವೇಳೆ ಬೆಂಗಳೂರು ನಗರ ಜಿಲ್ಲೆಗೆ ಸಂಪುಟದಲ್ಲಿ ಸಿಂಹಪಾಲು ದೊರೆತಿದ್ದು, ಒಟ್ಟು 7 ಶಾಸಕರು ಸಚಿವರಾಗಿದ್ದಾರೆ. ಆರ್ ಅಶೋಕ್, ಸೋಮಣ್ಣ, ಅಶ್ವತ್ಥ್​ ನಾರಾಯಣ, ಎಸ್ ಟಿ ಸೊಮಶೇಖರ್, ಮುನಿರತ್ಮ, ಬೈರತಿ ಬಸವರಾಜ್ ಮತ್ತು ಗೋಪಾಲಯ್ಯ ಸ್ಥಾನ ಪಡೆದಿದ್ದಾರೆ.

ಸಚಿವರಾಗಿದ್ದವರಲ್ಲಿ ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಶ್ರೀಮಂತ್ ಪಾಟೀಲ್, ಆರ್ ಶಂಕರ್, ಸಿ ಪಿ ಯೋಗಿಶ್ವರ್, ಅರವಿಂದ ಲಿಂಬಾವಳಿ ಸ್ಥಾನ ಕಳೆದುಕೊಂಡಿದ್ದಾರೆ.

ಬಿ ಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಬಂಡೆದ್ದು ಸುದ್ದಿಯಾಗಿದ್ದ ಅರವಿಂದ್ ಬೆಲ್ಲದ್, ಸಿ ಪಿ ಯೋಗೀಶ್ವರ್, ಯತ್ನಾಳ್ ಅವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ರೇಣುಕಾಚಾರ್ಯ ಕೂಡ ಸಂಪುಟ ಸೇರಲು ಬಹಳ ಪ್ರಯತ್ನಪಟ್ಟಿದ್ದರು. ಆದರೆ ಅವರಿಗೆ ಸ್ಥಾನ ಒಲಿದಿಲ್ಲ.

ಬೊಮ್ಮಾಯಿ ಸಂಪುಟದಲ್ಲಿ ಹೊಸ ಮುಖಗಳು:

ಅರಗ ಜ್ಞಾನೇಂದ್ರ, ವಿ ಸುನೀಲ್ ಕುಮಾರ್, ಮುನಿರತ್ನ, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ, ಬಿ ಸಿ ನಾಗೇಶ್ ಈ ಆರು ಶಾಸಕರು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ವಿಜಯೇಂದ್ರಗೆ ಇಲ್ಲ ಸ್ಥಾನ:

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಸಚಿವರಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ನೂತನ ಸಚಿವರ ಪಟ್ಟಿಯಲ್ಲಿ ಬಿ ವೈ ವಿಜಯೇಂದ್ರ ಹೆಸರು ಇಲ್ಲ.

ಸಮುದಾಯವಾರು ಸಚಿವರ ವಿವರ:

ಒಬಿಸಿ: ಕೆ ಎಸ್ ಈಶ್ವರಪ್ಪ, ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಬೈರತಿ ಬಸವರಾಜ್, ಹಾಲಪ್ಪ ಆಚಾರ್, ಎಂಟಿಬಿ ನಾಗರಾಜ್, ಆನಂದ್ ಸಿಂಗ್

ಒಕ್ಕಲಿಗ: ಆರ್ ಅಶೋಕ್, ಅಶ್ವತ್ಥ್ ​ನಾರಾಯಣ, ಅರಗ ಜ್ಞಾನೇಂದ್ರ, ಕೆ ಸಿ ನಾರಾಯಣಗೌಡ, ಕೆ ಸುಧಾಕರ್, ಕೆ ಗೋಪಾಲಯ್ಯ, ಎಸ್​ ಟಿ ಸೋಮಶೇಖರ್,
ರೆಡ್ಡಿ ಒಕ್ಕಲಿಗ: ಮುನಿರತ್ನ

ಲಿಂಗಾಯತ: ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಸಿ ಸಿ ಪಾಟಿಲ್, ಬಿ ಸಿ ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಜೆ ಮಾಧುಸ್ವಾಮಿ, ವಿ ಸೋಮಣ್ಣ,

ದಲಿತ: ಗೋವಿಂದ ಕಾರಜೋಳ, ಎಸ್ ಅಂಗಾರ, ಪ್ರಭು ಚೌಹಾಣ್​​​

ಬ್ರಾಹ್ಮಣ: ಶಿವರಾಂ ಹೆಬ್ಬಾರ್, ಬಿ ಸಿ ನಾಗೇಶ್

ಎಸ್​ಟಿ: ಶ್ರೀರಾಮುಲು

————-

ಸಚಿವರ ಜಿಲ್ಲಾವಾರು ವಿವರ:

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3.ಬಿಸಿ ಪಾಟೀಲ್ – ಹಿರೇಕೇರೂರು

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

6.ಉಮೇಶ್ ಕತ್ತಿ- ಹುಕ್ಕೇರಿ

7.ಎಸ್.ಟಿ.ಸೋಮಶೇಖರ್- ಯಶವಂತಪುರ

8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

9.ಬೈರತಿ‌ ಬಸವರಾಜ – ಕೆ ಆರ್ ಪುರಂ

10.ಮುರುಗೇಶ್ ನಿರಾಣಿ – ಬಿಳಿಗಿ

11.ಶಿವರಾಂ ಹೆಬ್ಬಾರ್- ಯಲ್ಲಾಪುರ

12.ಶಶಿಕಲಾ ಜೊಲ್ಲೆ- ನಿಪ್ಪಾಣಿ

13.ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ

14.ಸುನೀಲ್ ಕುಮಾರ್ – ಕಾರ್ಕಳ

15.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ

16.ಗೋವಿಂದ ಕಾರಜೋಳ-ಮುಧೋಳ

17.ಮುನಿರತ್ನ- ಆರ್ ಆರ್ ನಗರ

18.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21.ಹಾಲಪ್ಪ ಆಚಾರ್ – ಯಲ್ಬುರ್ಗ

22.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

23.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

24.ಪ್ರಭು ಚೌವ್ಹಾಣ್ – ಔರಾದ್

25.ವಿ ಸೋಮಣ್ಣ – ಗೋವಿಂದ್ ರಾಜನಗರ

26.ಎಸ್ ಅಂಗಾರ-ಸುಳ್ಯ

27.ಆನಂದ್ ಸಿಂಗ್ – ಹೊಸಪೇಟೆ

28.ಸಿ ಸಿ‌ ಪಾಟೀಲ್ – ನರಗುಂದ

29.ಬಿಸಿ ನಾಗೇಶ್ – ತಿಪಟೂರು

Spread the love

Related Articles

Leave a Reply

Your email address will not be published. Required fields are marked *

Back to top button