ಮತಾಂತರ ಕಾಯ್ದೆ ಜಾರಿಗೆ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ವಿರೋಧ

ಮೈಸೂರು : ಬಸವೇಶ್ವರ ಕಟ್ಟಿದ ಮಾನವ ಧರ್ಮವನ್ನ ಮುಖ್ಯಮಂತ್ರಿ ಹೊಡೆಯುವ ಕೆಲಸ ವಾಗಿರುವುದು ವಿಪರ್ಯಾಸ ಎಂದು ಮತಾಂತರ ಕಾಯ್ದೆ ವಿಧೇಯಕಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಸಮಾನತೆ ಬಗ್ಗೆ ಬಸವಣ್ಣ ಮಾನವ ಸ್ಥಾಪನೆ, ಜಾತಿ ಧರ್ಮ ಭೇದವಿಲ್ಲದೆ ಸಮಾನತೆ ಬಗ್ಗೆ ಹೇಳಿದ್ದರು. ಮುಖ್ಯಮಂತ್ರಿ ಹೆಸರು ಕೂಡ ಬಸವಣ್ಣನೆ ಎಂದು ಹೇಳಿದರು. ಭಾರತ ಬಹುತ್ವ ಉಳ್ಳದೇಶ. ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ.
ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಪ್ರಧಾನಿ ಮೋದಿ ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ದೇಶದ ಮಹನೀಯರು ಹೇಳಿರುವುದು ಸಹಬಾಳ್ವೆ ಬಗ್ಗೆಯೆ ಹೇಳಿರೋದು. ಆರ್.ಎಸ್.ಎಸ್ ನಾಯಕರ ಮಕ್ಕಳು ಮುಸ್ಲಿಂರ ಮಕ್ಕಳನ್ನು ಮದುವೆಯಾಗಿದ್ದಾರೆ. ಇವರುಗಳನ್ನು ಜೈಲಿಗೆ ಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಿನಿಮಾ ನಟರು ಬ್ರಾಹ್ಮಣರನ್ನು ಮದುವೆಯಾಗಿದ್ದಾರೆ. ಇವರನ್ನ ಜೈಲಿಗೆ ಹಾಕಲು ಸಾಧ್ಯವೇ… ಬಸವಣ್ಣನ ತತ್ವವನ್ನ ಅಳವಡಿಸಿಕೊಂಡಿರುವ ಮಠಾಧೀಶರು ಯಾರು ಮಾತನಾಡುತ್ತಿಲ್ಲ. ಚಿತ್ರದುರ್ಗದ ಮಠದವರು, ಅಹಿಂದ ಮಠಗಳು ಬಾಯಿ ಮುಚ್ಚಿಕುಳಿತಿದ್ದಾರೆ ಮಾತನಾಡುತ್ತಿಲ್ಲ. ನಿಮ್ಮ ಬಾಯಿ ಕಟ್ಟಿರುವುದು ಯಾರು?. ಸರ್ಕಾರ ನೀಡಿದ ಅನುದಾನ ನಿಮ್ಮ ಬಾಯಿ ಮುಚ್ಚಿಸಿದೆಯೇ..? ಸಾಹಿತಿಗಳು ಚಿಂತಕರು ಬಾಯಿಬಿಡುತ್ತಿಲ್ಲ. ರಾಜ್ಯೋತ್ಸವ ಪ್ರಶಸ್ತಿಗಷ್ಟೇ ಸೀಮಿತವಾದಿರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧವೇ ವಿಶ್ವನಾಥ್ ಮತಾಂತರ ಕಾಯ್ದೆಯನ್ನ ವಿರೋಧಿಸಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಮವಾಗಿದೆ.



