Breaking NewsLatestಬೆಳಗಾವಿರಾಜಕೀಯಸುದ್ದಿ

ಯಾವ ವಯಸ್ಸಲ್ಲಿ ಬೇಕಾದರೂ ಪ್ರೀತಿ ಮಾಡಬಹುದು… : ಸಿದ್ದರಾಮಯ್ಯ

ಬೆಳಗಾವಿ : ಪ್ರೀತಿ ಯಾವ ವಯಸ್ಸಲ್ಲಾದರೂ ಮಾಡಬಹುದು. ಪ್ರೀತಿಗೂ ವಯಸ್ಸಿಗೂ ಸಂಬಂಧ ಇಲ್ಲ.

ಇದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತು. ವಿಧಾನಸಭೆಯಲ್ಲಿ ಗುರುವಾರ ಮತಾಂತರ ನಿಷೇದ ವಿಧೇಯಕದ ಕುರಿತು ಮಾತನಾಡುವಾಗ, ಸ್ಪೀಕರ್ ಕಾಗೇರಿ, ಪ್ರೀತಿಗೂ, ವಯಸ್ಸಿಗೂ ಆಂತಕರಿಕ ಸಂಬಂಧ ಇಲ್ಲವೇ ಎಂದು ಪ್ರಶ್ನಿಸಿದರು. ಕಾಗೇರಿ ಅವರ ಈ ಮಾತು ಸದನದಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.

ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಪ್ರೀತಿ ಯಾವ ವಯಸ್ಸಲ್ಲಿ ಬೇಕಾದರೂ ಮಾಡಬಹುದು ಎಂದರು.

ಆಗ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯನವರೇ ನಿಮಗೆ ವಯಸ್ಸಾಗಿದೆ ಎಂದು ಯಾರು ಹೇಳಿದರು? ನಿಮ್ಮ ಮನೆಯವರು ಹೇಳಿಲ್ಲ ತಾನೇ ಎಂದು ಕಿಚಾಯಿಸಿದರು.

ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನಮ್ಮ ಮನೆಯವರು ನನಗೇನೂ ಹೇಳಿಲ್ಲ. ವಯಸ್ಸಾಗಿದೆ ಎಂದು ನಿಮಗೇನಾದರೂ ಅನ್ಸಿದೆಯಾ ಎಂದು ಈಶ್ವಪರನ್ನು ಮರುಪ್ರಶ್ನಿಸಿದರು. ಇಲ್ಲ ನನಗೆ ವಯಸ್ಸಾಗಿದೆ ಎಂದು ಅನಿಸಿಲ್ಲ ಎಂದೂ ಈಶ್ವರಪ್ಪ ಚುಟುಕಾಗಿ ಉತ್ತರಿಸಿದರು.

ಹುಡಗ-ಹುಡುಗಿ ಪ್ರೀತಿಸ್ತಾರೆ. ಅದಕ್ಕೆ ಸಂವಿಧಾನ ಅವಕಾಶ ನೀಡಿದೆ. ಅದಕ್ಕೆ ಅಡ್ಡಿ ಬರಲು ನೀವ್ಯಾರು ? ಇದೇ ವಿಷಯವಾಗಿ ಗುಜರಾತ್ ನ್ಯಾಯಾಲಯ ಅಲ್ಲಿನ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಪ್ರೀತಿ, ಪ್ರೀತಿಸುವವರ ಹಕ್ಕು . ಅದಕ್ಕೆ ಅಡಚಣೆ ಮಾಡಲು ನಾವ್ಯಾರು ಎಂದು ಅಲ್ಲಿನ ಕೋರ್ಟ್ ಮತಾಂತರ ನಿಷೇಧ ಕಾಯ್ದೆಗೆ ತಡೆ ನೀಡಿದೆ ಎಂದರು ಸಿದ್ದರಾಮಯ್ಯ.

Spread the love

Related Articles

Leave a Reply

Your email address will not be published. Required fields are marked *

Back to top button