Latestಮನರಂಜನೆಸಂಗೀತ/ನೃತ್ಯಸಿನಿಮಾಸೆಲೆಬ್ರಿಟಿ

ಮತ್ತೆ ಬಿಗಡಾಯಿಸಿದ ಲತಾ ಮಂಗೇಶ್ಕರ್ ಆರೋಗ್ಯ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಮತ್ತೆ ಬಿಗಡಾಯಿಸಿದೆ. ಕಳೆದ ಒಂದು ತಿಂಗಳಿನಿಂದ ಮುಂಬೈನ ಬ್ರೀಜ್ ಕ್ಯಾಂಟಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಮಂಗೇಶ್ಕರ್ ಕಳೆದ ಎರಡು ದಿನಗಳ ಹಿಂದೆ ಚೇತರಿಸಿಕೊಂಡಿದ್ದರು. ವೆಂಟಿಲೇಟರ್ ನಿಂದ ಹೊರ ಬಂದಿದ್ದ ಅವರ ಆರೋಗ್ಯ ದೊಡ್ಡ ಮಟ್ಟದಲ್ಲಿ ಸುಧಾರಿಸುತ್ತಿದೆ ಎಂದು ವೈದ್ಯ ಡಾ.ಪ್ರತೀಕ್ ಸಮ್ದಾನಿ ಹೇಳಿದ್ದರು. ಇದೀಗ ಲತಾ ಮಂಗೇಶ್ಕರ್ ಮತ್ತೆ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಅವರಿಗೆ ಪಾಸಿಟಿವ್ ಆಗಿದ್ದ ಸಿಬ್ಬಂದಿಯೊಬ್ಬರಿಂದ ಕೋವಿಡ್ ತಗಲಿದ್ದು ನ್ಯೂಮೋನಿಯಾ ಕೂಡ ದೃಡಪಟ್ಟಿತ್ತು. ಹೀಗಾಗಿ ಅವರನ್ನ ಮುಂಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button