ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಆಗುವ ಹುಚ್ಚು: ಹೆಚ್ ಡಿ ಕೆ

ಬೆಂಗಳೂರು: ಮೊದಲೆಲ್ಲ ಬೇಟಿ ಪಡಾವ್ ಬೇಟಿ ಬಚಾವ್ ಎನ್ನುತ್ತಿದ್ದರು. ಈಗ ಬೇಟಿ ಹಠಾವ್ ಎಂಬಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸಾಮರಸ್ಯ ಕಾಣಬೇಕು ಎಂಬ ಅಭಿಪ್ರಾಯ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಇದ್ದರೆ ಹಿಜಾಬ್ ವಿಚಾರವನ್ನು ಇಲ್ಲಿಗೆ ಬಿಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕರಾವಳಿ ಪ್ರದೇಶದ ಕೆಲವು ಕಡೆ ಈ ರೀತಿಯ ಬುರ್ಖಾ ವ್ಯವಸ್ಥೆ ಇತ್ತು ಅನ್ನೋದು ನನ್ನ ಗಮನಕ್ಕೆ ಇದೆ. ಕೆಲವು ಮುಸ್ಲಿಂ ಸಮಾಜದಲ್ಲಿ ಇತ್ತೀಚೆಗೆ ಕೆಲವು ಸಂಘಟನೆಗಳು ಬೆಳೆಯುತ್ತಿವೆ, ಯಾವ ಶಾಲೆಯಲ್ಲಿ ಹಿಜಾಬ್ ಗೆ ಅನುಮತಿ ಕೊಟ್ಟಿದ್ದರೋ ಅವರು ಅದನ್ನು ಮುಂದುವರೆಸಿಕೊಂಡು ಹೋಗಲಿ. ಹೊಸದಾಗಿ ಕೆಲವರು ಇಂಥದಕ್ಕೆ ಯಾಕೆ ಈಗ ಅನಮತಿ ಕೊಟ್ಟರು. ಹಿಂದೂ – ಮುಸ್ಲಿಂ ಎಂಬುದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಇಂತಹ ಭಾವನೆ ಬೆಳೆಯಲು ಯಾಕೆ ಅವಕಾಶ ಕೊಡ್ತಾ ಇದ್ದೀರಿ. ಹಿಂದಿನಿಂದ ಯಾವ ವಾತಾವರಣದಲ್ಲಿ ಶಾಲೆಗಳು ನಡೆಯುತ್ತಿತ್ತೋ ಅದೇ ವಾತಾವರಣ ಮುಂದುವರೆಯಲಿ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಮುಖ್ಯಮಂತ್ರಿ ಆಗುವ ಹುಚ್ಚು, ಇಬ್ಬರಿಗೂ ಓಟು ಪಡೆಯುವ ಹುಚ್ಚು ಹೆಚ್ಚಾಗಿದೆಯೇ ವಿನಃ ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ಮನಸ್ಥಿತಿ ಇಲ್ಲ. ಬಿಜೆಪಿಯವರಿಗೆ ಮತ ಪಡೆಯುವ ಹುಚ್ಚು ಜಾಸ್ತಿಯಾಗಿದೆ. ಸಿದ್ದರಾಮಯ್ಯ ಒಂದು ಹೇಳಿದ್ರೆ ಡಿಕೆಶಿ ಇನ್ನೊಂದು ರೀತಿಯ ಮಾತು ಹೇಳ್ತಾರೆ. ಅವರಿಬ್ಬರಿಗೂ ಮುಸ್ಲಿಂ ಮತಗಳನ್ನು ಪಡೆಯುವ ಹುಚ್ಚು ಶುರುವಾಗಿದೆ ಎಂದರು.



