Latestಉಡುಪಿಜಿಲ್ಲಾ ಸುದ್ದಿರಾಜ್ಯಸುದ್ದಿ
ACB Raid: ಪ್ಲಂಬಿಂಗ್ ಪೈಪ್ನಲ್ಲಿ ಹಣ ಬಚ್ಚಿಟ್ಟ pwd ಜೆಇ : ಎಸಿಬಿ ಅಧಿಕಾರಿಗಳಿಂದ ಪತ್ತೆ

ಕಲಬುರ್ಗಿ: ಲೋಕೋಪಯೋಗಿ ಇಲಾಖೆಯ (PWD) ಜೆ.ಇ ಶಾಂತಗೌಡ ಮನೆ ಮೇಲೆ ಎಸಿಬಿ ದಾಳಿ ಪ್ರಕರಣದಲ್ಲಿ ಶೋಧಕಾರ್ಯ ಮುಂದುವರೆದಿದ್ದು ನೀರಿನ ಪೈಪ್ನಲ್ಲಿ ಹಣ ಇಟ್ಟಿರುವದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಗುಬ್ಬಿ ಕಾಲೋನಿಯಲ್ಲಿರುವ ಶಾಂತಗೌಡ ಅವರ ಮನೆಯ ಫೈಪ್ ಗಳಲ್ಲಿಯೂ ಹಣ ಚಿನ್ನಾಭರಣ ಪತ್ತೆಯಾಗುತ್ತಿವೆ.
ಇಂದು ಬೆಳಗಿನ ಜಾವ ಎಸಿಬಿ ಅಧಿಕಾರಿಗಳು ದಾಳಿಗೆ ಮನೆಗೆ ಬಂದಾಗ ಸುಮಾರು 10 ನಿಮಿಷ ಬಾಗಿಲು ತೆರೆಯದೆ ಸತಾಯಿಸಿದ ಶಾಂತಗೌಡ, ಹತ್ತು ನಿಮಿಷದ ಗ್ಯಾಪಿನಲ್ಲಿ ಹಣ ಪೈಪ್ ನಲ್ಲಿ ಬಿಸಾಕಿದ್ದಾರೆ. ಎಸಿಬಿ ಅಧಿಕಾರಿಗಳು ಇದನ್ನು ಪತ್ತೆ ಮಾಡಿದ್ದು,ಫ್ಲಂಬರ್ ರನ್ನ ಕರೆಯಿಸಿ ಪೈಪ್ ಕಟ್ ಮಾಡಿಸಿ ಹಣ ಹುಡುಕುತ್ತಿದ್ದಾರೆ.
ಈಗಾಗಲೇ 40 ಲಕ್ಷಕ್ಕಿಂತ ಅಧಿಕ ನಗದು, ಚಿನ್ನಾಭರಣ ಪತ್ತೆಯಾಗಿದೆ. ಶೋಧ ಕಾರ್ಯ ಮುಂದುವರೆದಿದ್ದು, ಇನ್ನೂ ಎರಡು ಲಾಕರ್ ಕೀ ನೀಡದೆ ಶಾಂತಗೌಡ ಸತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ



