Latestಕೊಡಗುಜಿಲ್ಲಾ ಸುದ್ದಿ

ಆಂಧ್ರ ಪ್ರದೇಶ ದಿಂದ ಕೇರಳಕ್ಕೆ ಗಾಂಜಾ ಸಾಗಾಟ : 227 ಕೆ.ಜಿ ಗಾಂಜಾ ಸಹಿತ ಮೂವರ ಬಂಧನ

ಕೊಡಗು: ಆಂಧ್ರ ಪ್ರದೇಶ ದಿಂದ ಕೇರಳ ರಾಜ್ಯಕ್ಕೆ ಸಾಗಾಟವಾಗುತ್ತಿದ್ದ 227 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿರುವ ಅಬಕಾರಿ ಕಾನೂನು ಮತ್ತು ಜಾರಿ ಇಲಾಖೆ ಮೂವರನ್ನು ಬಂಧಿಸಿ ಎರಡು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಕೇರಳ ರಾಜ್ಯದ ಮಟ್ಟನ್ನೂರು ಪುತ್ತನ್‌ಪುರ ನಿವಾಸಿ ಅಬ್ದುಲ್ ಮಜೀದ್, ತಲಚೇರಿ ನಿವಾಸಿ ಸಜೀರ್ ಹಾಗೂ ವಲಿಯಾಂಬ್ರ ಪಯಶಿ ಶಕೀಲಾ ಮಂಜಿಲ್ ನಿವಾಸಿ ಎಂ.ಶಂಶೀರ್ ಬಂಧಿತ ಆರೋಪಿಗಳು,

ಕರ್ನಾಟಕ ಗಡಿಯನ್ನು ಕೊಡಗಿನ ಕುಟ್ಟ ಮೂಲಕ ದಾಟಿದ ಲಾರಿ ಹಾಗೂ ಪಿಕ್‌ ಅಪ್ ವಾಹನಗಳು ವಳವು ಪಾರ ಎಂಬ ಸ್ಥಳದಲ್ಲಿ ನಿಲುಗಡೆಗೊಂಡು ಲಾರಿಯಲ್ಲಿದ್ದ ಗಾಂಜಾ ಪೊಟ್ಟಣಗಳನ್ನು ಪಿಕ್ ಅಪ್ ವಾಹನದಲ್ಲಿ ತುಂಬಿಸುವ ಸಂದರ್ಭ ಖಚಿತ ಮಾಹಿತಿ ಮೇರೆಗೆ ಕೇರಳ ರಾಜ್ಯದ ಅಬಕಾರಿ ಕಾನೂನು ಮತ್ತು ಜಾರಿ ಇಲಾಖೆ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ವಶಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ 2 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button