Breaking NewsLatestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ನಾಯಕರ ವೈಯಕ್ತಿಕ ಹೇಳಿಕೆ ಪಕ್ಷ ವಿರೋಧಿ‌ ಅಲ್ಲ: ಜಗದೀಶ್ ಶೆಟ್ಟರ್​​

ಹುಬ್ಬಳ್ಳಿ: ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ‌ ಅವರು ಹಿರಿಯ ಸಚಿವರು ರಾಜೀನಾಮೆ ನೀಡಿ‌, ಹೊಸಬರಿಗೆ ಅವಕಾಶ ನೀಡಿ ಎಂದು ಅವರ ಅಭಿಪ್ರಯಾವನ್ನು ಹೇಳಿದ್ದಾರೆ. ಅದೂ ಪಕ್ಷ ವಿರೋಧಿ ಚಟುವಟಿಕೆ ಆಗುವುದಿಲ್ಲ. ಜೊತೆಗೆ ವೈಯಕ್ತಿಕ ಹೇಳಿಕೆ ಅಥವಾ ಅಭಿಪ್ರಾಯವನ್ನು ಪಕ್ಷ ವಿರೋಧಿ ಅನ್ನುವುದಕ್ಕೆ ಬರುವುದಿಲ್ಲ ಎನ್ನುವ ಮೂಲಕ ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮರ್ಥನೆ ಮಾಡಿಕೊಂಡರು.

ನಗದಲ್ಲಿ‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದಲ್ಲಿ ಎಲ್ಲರಿಗೂ ಅವರ ಅವರ ಅಭಿಪ್ರಯವನ್ನು ವ್ಯಕ್ತಪಡಿಸುವುದಕ್ಕೆ ಮುಕ್ತ ಅವಕಾಶವಿದೆ. ಈ ಹಿಂದಿನಿಂದಲೂ ಹಿರಿಯರು ಹೊಸಬರಿಗೆ ಅವಕಾಶ ಮಾಡಿಕೊಡಬೇಕು‌ ಎಂಬ‌ ಮಾತುಗಳು‌ ಕೇಳಿ‌ ಬರುತ್ತಲ್ಲೇ ಇವೆ.‌ ಹಾಗಾಗಿ ಇದರ ಕುರಿತು ಕೋರ್ ಕಮಿಟಿ‌ ಸಭೆಯಲ್ಲಿ‌ ಚರ್ಚೆ ಮಾಡುತ್ತೇವೆ. ಒಬ್ಬ ಮಾಜಿ ಸಿಎಂ ಆಗಿ, ಮಾಜಿ ರಾಜ್ಯಾಧ್ಯಕ್ಷನಾಗಿ ಬೇರೆಯವರಂತೆ ಬಹಿರಂಗವಾಗಿ‌ ಅದರ ಬಗ್ಗೆ ನಾನು ಮಾತನಾಡುವುದಕ್ಕೆ ಬರುವುದಿಲ್ಲ. ಕೋರ್ ಕಮಿಟಿಯಲ್ಲಿ ಅದರ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದರು.‌

ಕೋರ ಕಮಿಟಿ ಸಭೆ ರದ್ದು:

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​​ ಸಿಂಗ್ ಅವರು ದೆಹಲಿಗೆ ಬೇಗ ತೆರಳಬೇಕಾಯಿತು. ಹಾಗಾಗಿ ಅವರು ಹೋದ ಹಿನ್ನೆಲೆಯಲ್ಲಿ ಹಾಗೂ ಯಡಿಯೂರಪ್ಪ ನವರು ಮೊದಲೇ‌ ನಿಶ್ಚಯವಾಗಿದ್ದ ಕಾರಣ ದುಬೈಗೆ ಹೋಗಿದ್ದರು. ಹಾಗಾಗಿ ಶೇ. 100 ರಷ್ಟು ನಾಯಕರ ಕೊರತೆಯಿಂದಾಗಿ ಸಭೆ ರದ್ದಾಗಿದೆ. ಹೊರತು ಬೇರೆ ಯಾವ ಕಾರಣವು ಇಲ್ಲ.‌ ಮುಂದಿನ ದಿನಗಳಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗುವುದು ಅದರಲ್ಲಿ ಎಲ್ಲ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.

ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಹೆಚ್ಚು ಪ್ರಗತಿ ಸಾಧಿಸುತ್ತಿದೆ:

ಇನ್ನೂ ಅಣ್ಣಿಗೇರಿ ಪುರಸಭೆ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ವೈಯುಕ್ತಿಕ ಹಾಗೂ ವ್ಯಕ್ತಿಗತವಾಗಿ ನಡೆಯುತ್ತವೆ. ಬೇರೆ ಬೇರೆ ನಗರಸಭೆ ಮತ್ತು ಪುರಸಭೆಗಳಲ್ಲಿ ನಮ್ಮ ಸ್ಥಾನಗಳ ಪ್ರಮಾಣ ಹೆಚ್ಚಾಗಿದೆ. ವಿಧಾನ ಪರಿಷತ್ ಕಳೆದ ಬಾರಿ 6 ಸ್ಥಾನ ಅಷ್ಟೇ ಇದ್ದವು ಆದರೆ ಈ ಬಾರಿ 11 ಸ್ಥಾನಗಳಿಗೆ ಏರಿಕೆಯಾಗುವ ಮೂಲಕ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗಳಿಸಿದ್ದೇವೆ. ಹಾಗಾಗಿ ನಮ್ಮ‌ ಪಕ್ಷ ಕಳೆದ ಬಾರಿಗಿಂತಲೂ ಹೆಚ್ಚು ಪ್ರಗತಿ ಸಾಧಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಫಲಿತಾಂಶದ ಬಗ್ಗೆ ಪರಾಮರ್ಶೆ ಮಾಡುತ್ತೇವೆ:

ಬಿಜೆಪಿ ಶಾಸಕರಿದ್ದ ಕಡೆಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಶಾಸಕರಿದ್ದ ಕಡೆಗೆ ಅವರು ಹೆಚ್ಚಿನ ಸ್ಥಾನ ಗೆದ್ದಿದ್ದಾರಾ? ಎಂದು ಮರುಪ್ರಶ್ನೆ ಮಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಈ ರೀತಿಯ ಫಲಿತಾಂಶ ಸಹಜ. ಈ ಕುರಿತು ಪರಾಮರ್ಶೆ ಮಾಡುತ್ತೇವೆ ಎಂದರು.

ಕೋರ್ ಕಮಿಟಿ ಸಭೆಯಲ್ಲಿ ಎಲ್ಲವನ್ನು ಚರ್ಚೆ ಮಾಡುತ್ತೇವೆ:

ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯ ಬಳಿಕ‌ ಕೋರ್ ಕಮಿಟಿ ಸಭೆ ನಡೆಸಬೇಕು‌‌ ಎಂದು ಚಿಂತನೆ ಇತ್ತು. ಆದರೆ ಕೋರಂ ಇಲ್ಲದ‌‌ ಕಾರಣ, ಜೊತೆಗೆ ನಮ್ಮ ನಾಯಕರಾದ ಯಡಿಯೂರಪ್ಪನವರು ದುಬೈ ಪ್ರವಾಸದಲ್ಲಿರು ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ಇನ್ನೂ ಎಂಟು‌ ಹತ್ತು‌‌ ದಿನಗಳಲ್ಲಿ ಕೋರ್ ಕಮಿಟಿ ಸಭೆ ನಡೆಯುತ್ತೆ, ಅಲ್ಲಿ‌ ಎಲ್ಲ ವಿಚಾರಗಳನ್ನು ಚರ್ಚೆ ಮಾಡುತ್ತೇವೆ. ಅಲ್ಲದೆ‌ ಶಾಸಕ ಅರವಿಂದ್ ಬೆಲ್ಲದ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದು ನನಗೆ ‌ಗೊತ್ತಿಲ್ಲ. ಅದರ ಬಗ್ಗೆ ತಿಳಿದುಕೊಳ್ಳುತ್ತೇನೆ. ಸಾಧ್ಯವಾದ್ರೆ ಬರುವ ಕೋರ್ ಕಮಿಟಿ ಸಭೆಯಲ್ಲಿ‌ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.‌

Spread the love

Related Articles

Leave a Reply

Your email address will not be published. Required fields are marked *

Back to top button