
ನವದೆಹಲಿ: ಪಂಜಾಬಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದ್ದು, ಮಾಜಿ ಕ್ರಿಕೆಟ್ ಪಟು ದಿನೇಶ್ ಮೊಂಗಿಯಾ ಮಂಗಳವಾರ ದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ದೆಹಲಿಯ ಪಕ್ಷದ ಕಚೇರಿಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ದಿನೇಶ್ ಮೊಂಗಿಯಾ ಜೊತೆಗೆ ಮೂವರು ಹಾಲಿ ಶಾಸಕರು ಸಹ ಬಿಜೆಪಿ ಸೇರಿದ್ದಾರೆ .
ಚಂಡೀಗಢದಲ್ಲಿ ಜನಿಸಿದ 44 ವರ್ಷದ ಎಡಗೈ ಆಟಗಾರ 2001 ರಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿ , ನಂತರ ,2007 ರಲ್ಲಿ ಬಾಂಗ್ಲಾ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 77 ಸ್ಥಾನ ಪಡೆಯುವ ಮೂಲಕ ಸ್ಪಷ್ಟ ಬಹುಮತಗಳಿಸಿ ಅಧಿಕಾರಕ್ಕೆ ಬಂದಿತ್ತು. ಆಮ್ ಆದ್ಮಿ ಪಕ್ಷ 20 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.
ನವಜೋತ್ ಸಿಂಗ್ ಸಿಧು, ಮೊಹಮ್ಮದ್ ಅಜರುದ್ದೀನ್ , ಗೌತಂ ಗಂಭೀರ್ ಕ್ರಿಕೆಟಿಗರು ರಾಜಕಾರಣಿಗಳಾಗಿ ಪರಿವರ್ತಿತರಾಗಿರುವುದನ್ನು ಗಮನಿಸಬಹುದು.



