ನಾಲ್ವರು ಶಾಸಕರ ಭಾವಚಿತ್ರವಿಟ್ಟು ತಿಥಿ ಪೂಜೆ ಮಾಡಿದ ಬೇಡ ಜಂಗಮ ಮಹಾಸಭಾ…!

ದಾವಣಗೆರೆ: ಸಚಿವ ಗೋವಿಂದ ಕಾರಜೋಳ ಸೇರಿದಂತೆ ಶಾಸಕರ ವಿರುದ್ಧ ಬೇಡ ಜಂಗಮ ಮಹಾಸಭಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶಾಸಕರ ಅಣುಕು ತಿಥಿ ಪೂಜೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ ಕರ್ನಾಟಕ ರಾಜ್ಯ ಬೇಡ ಸಂಗಮ ಕಾರ್ಯಕರ್ತರು, ನಗರದ ಜಯದೇವ ವೃತ್ತದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬೇಡ ಜಂಗಮರನ್ನ ಗುರಿಯಾಗಿಸಿಕೊಂಡಿರುವ ಕೆಲ ಶಾಸಕರು ಏನನ್ನೂ ಮಾಡುತ್ತಿಲ್ಲ. ಜಂಗಮರ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಶಾಸಕ ಪ್ರಿಯಾಂಕ ಖರ್ಗೆ. ಅನ್ನದಾನಿ, ಪಿ ರಾಜೀವ್. ಗೋವಿಂದ ಕಾರಜೋಳ ಅವರುಗಳ ಭಾವಚಿತ್ರಕ್ಕೆ ತಿಥಿ ಪೂಜೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ, ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ತೆರಳಿ ಮನವಿ ಸಲ್ಲಿಸಿದರು.
ಜಂಗಮ ಸಮುದಾಯಕ್ಕೆ ಈ ನಾಲ್ವರು ಶಾಸಕರು ದ್ರೋಹ ಬಗೆದಿದ್ದಾರೆ. ರದ್ದಾದ ಸುತ್ತೋಲೆ ಇಟ್ಟುಕೊಂಡು ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ನಡೆಸುತ್ತಿದ್ದಾರೆ. ಬೇಡ ಜಂಗಮರ ಜಾತಿ ಪ್ರಮಾಣ ಸುಳ್ಳು ಎಂದು ಅಪಪ್ರಚಾರ ಮಾಡುಲಾಗುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.




