Latest
ಶಾಲೆ ಪುನರಾರಂಭದ ಬಗ್ಗೆ ಸುಳಿವು ನೀಡಿದ ಶಿಕ್ಷಣ ಸಚಿವ

ಕೋವಿಡ್ ಮೂರನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಶಾಲೆಗಳನ್ನ ಬಂದ್ ಮಾಡಲಾಗಿದ್ದು ಇದೀಗ ಶಾಲೆ ಪುನಾರಾರಂಭದ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುಳಿವು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬಂದ್ ಆಗಿರುವ ಕಡೆ ಶಾಲೆ ಪುನಾರಾರಂಭಕ್ಕೆ ಚಿಂತನೆ ನಡೆಸಲಾಗುತ್ತಿದೆ. ಶುಕ್ರವಾರ ನಡೆಯಲಿರುವ ಸಿಎಂ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಲ್ಲದೆ ಪಾಸಿಟಿವ್ ಕೇಸ್ ಹೆಚ್ಚಿರುವ ಕಡೆಗಳಲ್ಲಿ ಶಾಲೆ ಬಂದ್ಗೆ ಸೂಚನೆ ನೀಡಲಾಗಿದ್ದು ಉಳಿದ ಕಡೆಗಳಲ್ಲಿ ಶಾಲೆಗಳನ್ನ ತೆರೆಯಲಾಗುವುದು ಎಂದು ನಾಗೇಶ್ ಹೇಳಿದ್ದಾರೆ.
ಶಾಲೆ ಬಂದ್ ಮಾಡುವುದು ಬೇಡ ಎಂದು ತಜ್ಞರು ಹೇಳಿದ್ದಾರೆ. ಕ್ಲಸ್ಟರ್ ಮಟ್ಟದಲ್ಲಿ ಶಾಲೆ ಬಂದ್ಗೆ ತಜ್ಞರು ಸಲಹೆ ನೀಡಿದ್ದು, ರಾಜ್ಯಾದ್ಯಂತ ಶಾಲೆ ಬಂದ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.



