Breaking NewsLatestಆರೋಗ್ಯರಾಷ್ಟ್ರೀಯವಿದೇಶಸುದ್ದಿ

ಲಸಿಕಾ ಅಸಮಾನತೆ ನಿವಾರಣೆಯಾದರೆ ಕೊರೋನಾ ತುರ್ತು ಪರಿಸ್ಥಿತಿ ಅಂತ್ಯ

ನವದೆಹಲಿ: ಜಗತ್ತನ್ನು ಕಳೆದ ಎರಡು- ಮೂರು ವರ್ಷಗಳಿಂದ ಎಡಬಿಡದೆ ಕಾಡುತ್ತಿರುವ ಕೋವಿಡ್ ಸೋಂಕು ಕೊನೆ ಯಾವಾಗ? ಎಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಈ ಪ್ರಶ್ನೆಗೆ ನಿಖರವಾದ ಉತ್ತರ ಸದ್ಯಕ್ಕೆ ಯಾರಿಂದಲೂ ಸ್ಪಷ್ಟವಾಗಿ  ದೊರಕುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಏನೇ ಹೇಳುವುದಿದ್ದರೂ  ವಿಶ್ವ ಆರೋಗ್ಯ ಸಂಸ್ಥೆ ಇಲ್ಲವೇ ಅಮೇರಿಕಾದ  ಹ್ಯಾಪಿಕಿನ್   ವಿಶ್ವವಿದ್ಯಾಲಯ ಡಾ ವಿಜ್ಞಾನಿಗಳು ಹೇಳಿದ ಮಾತೆ  ಸದ್ಯಕ್ಕೆ ವೇದವಾಕ್ಯವಾಗಿದೆ.

ಈ ವರ್ಷದೊಳಗೆ ಕೋವಿಡ್ ತುರ್ತು ಪರಿಸ್ಥಿತಿ ಹಾವಳಿ  ಕೊನೆಯಾಗಬಹುದು ಎಂದು ವಿಶ್ವಸಂಸ್ಥೆಯ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಮೈಕ್ ರಯಾನ್  ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ದಾವೋಸ್ ನ್  ಎಕನಾಮಿಕ ಫೋರಂ ಸಭೆಯಲ್ಲಿ  ಮಾತನಾಡಿದ ಅವರು, ವಿಶ್ವದಲ್ಲಿ ಈ ವರ್ಷ ಕೊರೊನಾ ತುರ್ತು ಪರಿಸ್ಥಿತಿ ಕೊನೆಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ . ಅನೇಕ ದೇಶಗಳಲ್ಲಿ  ಲಸಿಕೆ ಅಸಮಾನತೆ ಕೊನೆಗೊಂಡರೆ  ಕೊರೊನಾ ಸಾವು, ಆಸ್ಪತ್ರೆಗೆ ಸೇರುವವರ ಮೇಲಿನ ಒತ್ತಡ ನಿಧಾನವಾಗಿ ಕೊನೆಯಾಗಲಿದೆ. 

ಕೊರೊನಾ ಸೋಂಕು  ನಿವಾರಣೆಯಾಗಬೇಕಾದರೆ ಶ್ರೀಮಂತ, ಬಡ ದೇಶಗಳ ನಡುವಣ ಲಸಿಕಾ ಅಸಮಾನತೆ ಕೊನೆಗೊಳಿಸಿದರೆ ಮಾತ್ರ ಕೊರೊನಾ ತುರ್ತು ಪರಿಸ್ಥಿತಿ ಅಂತ್ಯವಾಗಲಿದೆ. ಬಡದೇಶಗಳಲ್ಲಿನ  ಶೇಕಡ  10 ರಷ್ಟು ಜನರು ಇನ್ನೂ ಲಸಿಕೆಯನ್ನೆ  ಪಡೆದಿಲ್ಲ ಎಂದು ಅವರು ಆತಂಕ ತೋಡಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button