Breaking NewsLatestರಾಷ್ಟ್ರೀಯಸುದ್ದಿ

INS Ranvir: ಐಎನ್‌ಎಸ್‌ ರಣವೀರ್ ಹಡಗಿನಲ್ಲಿ ಸ್ಫೋಟ : ಮೂವರು ನೌಕಾಪಡೆಯ ಯೋಧರ ಸಾವು

ನವದೆಹಲಿ: ಭಾರತೀಯ ನೌಕಾಪಡೆಯ ದಾಳಿ ನೌಕೆ ಐಎನ್​ಎಸ್ ರಣವೀರ್​ನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಯೋಧರು ಮೃತಪಟ್ಟಿದ್ದಾರೆ, ಹಲವರಿಗೆ ಗಾಯವಾಗಿದೆ.

ಮುಂಬೈನ ನೌಕಾನೆಲೆಯಲ್ಲಿ ನಡೆದ ದುರದೃಷ್ಟಕರ ಘಟನೆ ನಡೆದಿದ್ದು, ಐಎನ್ಎಸ್ ರಣವೀರ್ ಹಡಗಿನ ಆಂತರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಯೋಧರು ಸಾವನ್ನಪ್ಪಿದ್ದಾರೆ. ಕೃಷ್ಣಕುಮಾರ್​, ಸುರೇಂದ್ರ ಕುಮಾರ್​ ಹಾಗೂ ಎಕೆ ಸಿಂಗ್ ಮೃತ ಯೋಧರು ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ನೌಕೆಯಲ್ಲಿದ್ದ ಇತರ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳಿಂದ ಈ ಸ್ಫೋಟ ಸಂಭವಿಸಿಲ್ಲ ಎಂದು ತಿಳಿಸಲಾಗಿದ್ದು, ಸ್ಫೋಟದ ಬಗ್ಗೆ ಸಮಗ್ರ ತನಿಖೆ ನಡೆಸಲು ನೌಕಾಪಡೆಯು ವಿಚಾರಣಾ ಆಯೋಗವನ್ನು ರಚಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button