ಕೊರೊನಾ ಕಾಟಕ್ಕೆ ಗಿಡದಲ್ಲಿ ಕೊಳೆಯುತ್ತಿರುವ ಬಾಳೆ : ಕಣ್ಣಿರಿನಲ್ಲಿ ಮುಳುಗಿದ ಅನ್ನದಾತ

ಕಲಬುರಗಿ : ಕೊರೊನಾ ಮಹಾಮಾರಿ ಎಲ್ಲಾ ಸಮುದಾಯಕ್ಕೆ ಹೊಡೆತ ನೀಡಿದೆ. ರಾಜ್ಯದಲ್ಲಿಗ ಬಹುತೇಕರಿಗೆ ಶೀತ ಜ್ವರ ಗಂಟಲು ನೋವು ಕಫಾ ಬಂದಿದೆ. ಇದು ಬಾಳೆ ಬೆಳೆದ ರೈತರನ್ನು ಕಂಗಾಲಾಗಿ ಮಾಡಿದೆ.
ಫಸಲು ಮಾರಾಟ ಮಾಡಿ ಇರುವ ಕಷ್ಟ ದೂರು ಮಾಡಿಕೊಳ್ಳಬಹುದು ಎಂಬ ಕಣಸಿನಲ್ಲಿದ್ದ ರೈತ ಈಗ ಮತ್ತೆ ಕಣ್ಣಿರು ಹಾಕುವ ಪರಸ್ಥೀತಿ ನಿರ್ಮಾಣವಾಗಿದೆ. ಕೊರೊನಾ ಕಾರಣಕ್ಕೆ ಬಾಳೆ ಹಣ್ಣು ತಿನ್ನುವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಬಾಳೆ ಮಾರಾಟವಾಗದೆ ಗಿಡದಲ್ಲಿಯೇ ಕೊಳೆತು ನಾರುತ್ತಿದೆ. ಕೈಗೆ ಬಂದು ತುತ್ತು ಬಾಯಿಗೆ ಬರದ ಕಾರಣಕ್ಕೆ ಬಾಳೆ ದಂಡನ್ನ ಮಣ್ಣಲ್ಲಿ ಬಿಸಾಕಿ ರೈತ ಹಣೆಗೆ ಕೈ ಹಚ್ಚಿ ಕುಳಿತ್ತಿದ್ದಾನೆ.
ಬಾಳೆ ಸೋಲಿಗೆ ಕಾರಣವಾದ ಜ್ವರ, ನೆಗಡಿ:
ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ಚಂದ್ರಯ್ಯ ಎಂಬ ರೈತ 6 ಎಕರೆ ಜಾಗದಲ್ಲಿ ಬೆಳೆದ ಬಾಳೆ ಕೇಳುವವರಿಲ್ಲದೇ ಕೈ ಸುಟ್ಟುಕೊಂಡಿದ್ದಾನೆ. ಎಲ್ಲಕೂ ಕಾರಣ ಹಾಳಾದ ಕೊರೊನಾ ಅಂತೆ. ಅಂದಾಜು ಮೂರು ಲಕ್ಷ ಸಾಲ ಮಾಡಿ ಬಾಳೆ ಬೆಳೆದಿದ್ದಾನೆ. ಹೇಗಿದ್ರೂ ಲಾಭ ಬರುತ್ತೆ ಅಂತ ಪಕ್ಕದಲ್ಲಿರೋ ಅಣ್ಣನಿಗೂ ಬಾಳೆ ತೋಟ ಮಾಡುವಂತೆ ಹೇಳಿದ್ದಾನೆ. ವಿಪರ್ಯಾಸ ಅಂದ್ರೆ ಕೊರೊನಾ ಗಾಳಿಯಲ್ಲಿ ಇಡೀ ಜಿಲ್ಲೆಯಲ್ಲಿ ಬಹುತೇಕರಿಗೆ ಜ್ವರ, ನೆಗಡಿ, ಗಂಟಲು ಕಫಾ ಬಂದಿದೆ. ಹೀಗಾಗಿ ಬಾಳೆಹಣ್ಣನ್ನ ಯಾರೂ ಕೇಳದಂತಾಗಿದೆ. ಏಜಂಟರಿಗೆ ಹೇಳಿದ್ರೂ ಸಹ ಯಾರೂ ಖರೀದಿಗೆ ಬಂದಿಲ್ಲ. ಇನ್ನೇನು ಮಾಡೋದು ಅಂತ ಕೇವಲ ಮೂರು ರೂಪಾಯಿಗೆ ಡಜನ್ ಮಾರಿದ್ದಾನೆ. ಇನ್ನೇನು ಖರಾಬಾಗಿರೋ ಉಳಿದ ಹಣ್ಣನ್ನ ತಾನೇ ಮಣ್ಣಿಗೆ ಸುರಿದಿದ್ದಾನೆ. ಇಷ್ಟಾದರೂ ಸರ್ಕಾರ ನೆರವಿಗೆ ಬರ್ತಿಲ್ಲ ಅನ್ನೋದು ಅನ್ನದಾತನ ಅಳಲು.
ಇದು ಕೇವಲ ಒಬ್ಬನ ಕಥೆಯಲ್ಲ. ಕೊರೊನಾ ಮಹಾಮಾರಿಯ ಮೂರನೇ ಅಲೆಯಲ್ಲಿ ಆ ಕರ್ಫ್ಯೂ ಈ ಕರ್ಫ್ಯೂ ಗೆ ಅದೆಷ್ಟೋ ರೈತರು ಬರ್ಬಾದ್ ಆಗಿ ಹೋಗ್ತಿದ್ದಾರೆ. ಬೆಳೆದ ಬೆಳೆ ಕೈಕೊಟ್ಟಿರುವುದು ಒಂದುಕಡೆಯಾದರೆ, ಇನ್ನೊಂದು ಕಡೆ ಬೆಳೆ ಮಾರಾಟವಾಗದೆ ಅನೇಕ ರೈತರು ಸಂಕಷ್ಟದಲ್ಲಿ ಜೀವನ ಕಳೆಯುತ್ತಿದ್ದಾರೆ.



