ಮಕ್ಕಳ ಮದುವೆ ವದಂತಿ: ಗರಂ ಆದ ನಟ ಸುನೀಲ್ ಶೆಟ್ಟಿ

ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 70-80ರ ದಶಕದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸುನೀಲ್ ಶೆಟ್ಟಿ ಇಂದಿಗೂ ಸಾಕಷ್ಟು ಬೇಡಿಕೆ ಇಟ್ಟುಕೊಂಡಿದ್ದಾರೆ. ಸುನೀಲ್ ಶೆಟ್ಟಿಯಂತೆ ಅವರ ಮಕ್ಕಳು ಕೂಡ ಸಾಕಷ್ಟು ಸದ್ದು ಮಾಡ್ತಿದ್ದಾರೆ. ಆದ್ರೆ ಮಕ್ಕಳ ವಿಷಯಕ್ಕೆ ಇದೀಗ ಸುನೀಲ್ ಶೆಟ್ಟಿ ಫುಲ್ ಗರಂ ಆಗಿದ್ದಾರೆ.
ನಟ ಸುನೀಲ್ ಶೆಟ್ಟಿ ಬಾಲಿವುಡ್ ಜೊತೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಸದ್ದು ಮಾಡ್ತಿದ್ದಾರೆ. ಅಪ್ಪನಂತೆ ಸುನೀಲ್ ಪುತ್ರಿ ಆಥಿಯಾ ಶೆಟ್ಟಿ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಸಿನಿಮಾದ ಹೊರತಾಗಿಯೂ ಸುದ್ದಿಯಾಗ್ತಿದ್ದಾರೆ. ಆಥಿಯಾ ಶೆಟ್ಟಿ ಕುರಿತಾಗಿ ಸಿನಿಮಾದ ಹೊರತಾಗಿ ಸಾಕಷ್ಟು ಅಂತೆ ಕಂತೆಗಳು ಕೇಳಿ ಬರ್ತಿದ್ದು ಇದರಿಂದ ನಟ ಸುನೀಲ್ ಶೆಟ್ಟಿ ಗರಂ ಆಗಿದ್ದಾರೆ.
ಆಥಿಯಾ ಶೆಟ್ಟಿ ಕ್ರಿಕೆಟಿಗ ಕೆ.ಆಲ್.ರಾಹುಲ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇವರಿಬ್ಬರು ಒಟ್ಟಿಗಿರೋ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ, ಅದೇ ರೀತಿ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಮಾಡೆಲ್ ಕಂ ಫ್ಯಾಷನ್ ಡಿಸೈನರ್ ತಾನಿಯಾ ಶ್ರಾಫ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರು ಮದುವೆಯಾಗ್ತಿದ್ದಾರೆ ಅನ್ನೋ ಸುದ್ದಿ ಇತ್ತೀಚೆಗೆ ಜೋರಾಗಿಯೇ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಸುನೀಲ್ ಶೆಟ್ಟಿ ಗರಂ ಆಗಿದ್ದಾರೆ.
2022 ರಲ್ಲಿಯೇ ಸುನೀಲ್ ಶೆಟ್ಟಿ ತಮ್ಮಿಬ್ಬರು ಮಕ್ಕಳಿಗೆ ಮದುವೆ ಮಾಡಲಿದ್ದಾರೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಶೆಟ್ಟಿ ಟ್ವಿಟರ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಈ ಸುದ್ದಿ ನೋಡಿ ಅಚ್ಚರಿಪಡಬೇಕೋ ಅಥವಾ ನೊಂದುಕೊಳ್ಳಬೇಕೋ ತಿಳಿದಿಲ್ಲ. ಸತ್ಯವನ್ನು ತಿಳಿಯದೇ ಇಂಥ ಸುದ್ದಿ ಪ್ರಕಟಿಸುವ ಅವಶ್ಯಕತೆ ಏನು ಎಂಬುದು ಅರ್ಥವಾಗುತ್ತಿಲ್ಲ. ಇಂಥ ಬೇಜವಾಬ್ದಾರಿಯುತ ಲೇಖನಗಳಿಂದ ಪತ್ರಿಕೋದ್ಯಮದ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ಆಗುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.




