Latestಚಿಕ್ಕಮಗಳೂರು

ತೋಟಕ್ಕೆ ಬೆಂಕಿ: ಕಾಫಿ-ಅಡಕೆ ಗಿಡಗಳು ಆಹುತಿ

ಚಿಕ್ಕಮಗಳೂರು: ತೋಟವೊಂದಕ್ಕೆ ಬೆಂಕಿ ಬಿದ್ದು, ಕಾಫಿ-ಅಡಕೆ ಗಿಡಗಳು ಅಪಾರ ಪ್ರಮಾಣದಲ್ಲಿ ನಾಶವಾಗಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮಸ್ಥ ರತೀಶ್ ಎಂಬವರಿಗೆ ಸೇರಿದ ಸುಮಾರು 3 ಎಕರೆ ತೋಟದಲ್ಲಿ ಬಹುಪಾಲು ತೋಟಕ್ಕೆ ಬೆಂಕಿ ಧಗಧಗನೆ ವ್ಯಾಪಿಸಿ, ಅಡಕೆ, ಕಾಫಿ ಗಿಡಗಳು ಸುಟ್ಟು ಕರಕಲಾಗಿವೆ. ಕೆಲ ವರ್ಷಗಳ ಹಿಂದೆಯಷ್ಟೇ ಹೊಸದಾಗಿ ಗಿಡಗಳನ್ನು ನೆಟ್ಟಿದ್ದರು.

ಸುಮಾರು 2ಸಾವಿರ ಅಡಕೆ ಗಿಡಗಳು ಮತ್ತು 2 ಸಾವಿರ ಕಾಫಿ ಗಿಡಗಳು ನಾಶವಾಗಿದ್ದು, ತೀವ್ರ ನಷ್ಟ ಉಂಟಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಬೆಂಕಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button