ಕೊಡಗು
ಕೊಡಗಿನ ಜನತೆಗೆ ಆತಂಕ ಸೃಷ್ಟಿಸಿದ ಕಾಡಾನೆ: ವ್ಯಕ್ತಿ ಸ್ಥಿತಿ ಚಿಂತಾಜನಕ

ಕೊಡಗು : ಜಿಲ್ಲೆಯ ಕಾಡಾನೆ ದಾಳಿ ಮುಂದುವರೆಯುತ್ತಲೇ ಇದೆ. ಕೆಲ ದಿನಗಳ ಹಿಂದೆ ಬೈಕ್ ಸವಾರನೊಬ್ಬ ಕಾಡಾನೆ ದಾಳಿಗೆ ಬಲಿಯಾಗಿ ಜೀವ ಕಳೆದುಕೊಂಡಿದ್ದನು
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆ ಕೊಡಗಿನ ಕಳತ್ಮಾಡ್ ಗ್ರಾಮದ ಹೊಸೋಕ್ಲು ಮಾಚಯ್ಯ ಎಂಬುವವರ ಮೇಲೆ ರಾತ್ರಿ 7 ಗಂಟೆ ಸಮಯದಲ್ಲಿ ಕಾಡಾನೆ ದಾಳಿ ಮಾಡಿದೆ.
ಕಾಡಾನೆಯ ಹಿಡಿತಕ್ಕೆ ಸಿಲುಕಿದ ಮಾಚಯ್ಯರವರ ಎರಡೂ ಕಾಲುಗಳು ಗಂಭೀರವಾಗಿ ಗಾಯವಾಗಿದ್ದು, ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.




