Breaking NewsLatestಇತರ ಕ್ರೀಡೆಕ್ರೀಡೆ
ಅತಿಹೆಚ್ಚು ಗೋಲು ಗಳಿಕೆ ; ಕ್ರಿಸ್ಟಿಯಾನೋ ರೋನಾಲ್ಡೋ ದಾಖಲೆ

ಮ್ಯಾಂಚೆಸ್ಟರ್: ಅಂತಾರಾಷ್ಟ್ರೀಯ ಫುಟ್ಬಾಲ್ ನಲ್ಲಿ ಅತಿ ಹೆಚ್ಚು ಗೋಲು ಗಳಿಕೆಯ ಹೆಗ್ಗಳಿಕೆಗೆ ಪೋರ್ಚುಗೀಸ್ ನ ಕ್ರಿಸ್ಟಿಯಾನೋ ರೋನಾಲ್ಡೋ ಪಾತ್ರರಾಗಿದ್ದಾರೆ.
ಇರಾನಿನ ಆಲಿ ಡೇಯ್ ಅವರು ಗಳಿಸಿದ್ದ 109 ಗೋಲುಗಳು ಇದುವರೆಗಿನ ಅತಿ ಹೆಚ್ಚು ಗೋಲಾಗಿತ್ತು.
ಫಿಫಾ 2022 ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-1 ಗೋಲು ಗಳಿಸಿದ ಪಂದ್ಯದಲ್ಲಿ ರೊನಾಲ್ಡೊ 110ನೇ ಗೋಲು ಗಳಿಸುವುದರೊಂದಿಗೆ ಹೊಸ ದಾಖಲೆ ಬರೆದರು.
180ನೇ ಪಂದ್ಯದಲ್ಲಿ ರೊನಾಲ್ಡೊ 111ನೇ ಗೋಲು ಗಳಿಸಿದರು. ಅಲಿ ಡಾಯ್ 149 ಪಂದ್ಯಗಳಲ್ಲಿ 109 ಗೋಲುಗಳನ್ನು ಗಳಿಸಿದ್ದರು.
