ಮನರಂಜನೆಸಿನಿಮಾಸೆಲೆಬ್ರಿಟಿ

Jyothika: ಸೋಶಿಯಲ್ ಮೀಡಿಯಾದಲ್ಲಿ ಅಪರೂಪದ ದಾಖಲೆ ಸೃಷ್ಟಿಸಿದ ನಟಿ ಜ್ಯೋತಿಕಾ

ನಟಿ, ನಿರ್ಮಾಪಕಿ ಜ್ಯೋತಿಕಾ ಅವರು ಮಂಗಳವಾರ ಇನ್ ಸ್ಟಾಗ್ರಾಂ ಮೂಲಕ ಸಾಮಾಜಿಕ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ. ಅವರು ಮೊದಲ ಪೋಸ್ಟ್ ನಲ್ಲಿ ಕಾಶ್ಮೀರದ ಛಾಯಚಿತ್ರಗಳನ್ನು ಹಂಚಿಕೊಂಡಿದ್ದು, ಆ ಮೂಲಕ ಅವರು ಅಪರೂಪದ ದಾಖಲೆ ಸೃಷ್ಟಿಸಿದ್ದಾರೆ.

ನಟಿ ಜ್ಯೋತಿಕಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೊ ಸ್ವಾತಂತ್ರ್ಯ ದಿನದಂದು ಹಿಮಾಲಯದಲ್ಲಿ ತೆಗೆದ ಫೋಟವಾಗಿದೆ. ಅಲ್ಲದೇ ಅವರು, ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಲಾಕ್ ಡೌನ್ ಡೈರಿಗಳನ್ನು ಹಂಚಿಕೊಳ್ಳಲಿ ಖುಷಿಯಾಗುತ್ತಿದೆ ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.

ಹಾಗೇ ಭಾರತ ತುಂಬಾ ಸುಂದರವಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಆದರೆ ಇತ್ತೀಚಿಗೆ ಬಂದ ಮಾಹಿತಿ ಏನೆಂದರೆ ಅವರು ಕೇವಲ 45 ನಿಮಿಷಗಳಲ್ಲಿ 1.2 ಮಿಲಿಯನ್ ಫಾಲೋವರ್ಸ್ ಅನ್ನು ಗಳಿಸಿದ್ದಾರಂತೆ. ಇದು ಅವರ ಅಪರೂಪದ ದಾಖಲೆ ಎನ್ನಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button