Latestರಾಷ್ಟ್ರೀಯಸುದ್ದಿ

ಪ್ರತಿಭಟನಾನಿರತ ರೈತರ ಸಾವಿಗೆ ಟಿಕಾಯತ್ ಹೊಣೆ: ಬಿಜೆಪಿ ಮುಖಂಡ ಹರಿನಾರಾಯಣ ಆರೋಪ

ಬಲ್ಲಿಯಾ: ಪ್ರತಿಭಟನೆಯ ವೇಳೆ ರೈತರು ಮೃತಪಟ್ಟಿರುವುದಕ್ಕೆ ಬಿಕೆಯು ರಾಕೇಶ್ ಟಿಕಾಯತ್ ಹೊಣೆ ಎಂದು ಬಿಜೆಪಿ ನಾಯಕ ಹರಿನಾರಾಯಣ ರಾಜ್ಬರ್ ಆರೋಪಿಸಿದ್ದಾರೆ.

ರಾಕೇಶ್ ಟಿಕಾಯತ್ ಓರ್ವ ಭಯೋತ್ಪಾದಕ. ಕೇಂದ್ರ ಕೃಷಿ ಕಾಯ್ದೆಯನ್ನು ಹಿಂಪಡೆದಿರುವುದರಿಂದ ರೈತರಿಗೆ ನಷ್ಟವಾಗಲಿದೆ ಹಾಗೂ ಖಲಿಸ್ಥಾನಿ ಗೂಂಡಾಗಳಿಗೆ ಲಾಭವಾಗಲಿದೆ ಎಂದು ಹರಿನಾರಾಯಣ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ 700 ರೈತರು ಮೃತಪಟ್ಟಿರುವುದಕ್ಕೆ ಟಿಕಾಯತ್ ಹೊಣೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹಾಗೂ ಮೃತಪಟ್ಟ ರೈತರ ಕುಟುಂಬಸ್ಥರಿಗೆ ಪರಿಹಾರ ನೀಡಲು ಅವರ ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಎಸ್ಬಿಎಸ್ಪಿ (ಸುಹಲ್ದೇವ್ ಭಾರತೀಯ ಸಮಾಜ ಪಕ್ಷ) ವರಿಷ್ಠ ಓಂಪ್ರಕಾಶ್ ರಾಜ್ಬರ್ ಅವರು “ಮಾಫಿಯಾ ಮುಖ್ತಾರ್ ಅನ್ಸಾರಿ ಅವರ ಶೂಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button