Latestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಬೆಳಗಾವಿಯಲ್ಲಿ ನಮ್ಮ ಅಭ್ಯರ್ಥಿ ಮಹಾಂತೇಶ ಕವಠಗಿಮಠ ಗೆಲುವು ನಿಶ್ಚಿತ: ಸಿಎಂ ಬೊಮ್ಮಾಯಿ

ಧಾರವಾಡ : ಇಂದು ಬೆಳಗಾವಿಯಲ್ಲಿ ಸಭೆ ಇದೆ. ಪಕ್ಷದ ಶಾಸಕರು ಮುಖಂಡರ ಸಭೆ ಕರೆದಿದ್ದೆವೆ. ನಮ್ಮ ಅಭ್ಯರ್ಥಿ ಗೆಲ್ಲೋಕೆ ಏನೆಲ್ಲಾ ಸೂಚನೆ ನೀಡಬೇಕು ಅದನ್ನು ನೀಡಲಾಗಿದೆ. ಬೆಳಗಾವಿಯಲ್ಲಿ ನಮ್ಮ ಅಭ್ಯರ್ಥಿ ಮಾಹಾಂತೇಶ ಕವಠಗಿಮಠ ಗೆಲುವು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಬೆಳಗಾವಿಯ ಕ್ಷೇತ್ರದಲ್ಲಿ ಅಲೆ ಇದೆ. ಹಾಗಾಗಿ ಅವರು ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ. ಇನ್ನೂ ಲಖನ್ ಜಾರಕಿಹೊಳಿ ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. ಅದರಿಂದ ನಮ್ಮ ಅಭ್ಯರ್ಥಿಗೆ ಯಾವುದೇ ತೊಂದರೆ ಇಲ್ಲ ಎಂದರು.

ಜಿನೋಮ್ ಸ್ವಿಕ್ವೆನ್ಸ್ ಟೆಸ್ಟ್ ಲ್ಯಾಬ್ ಹೆಚ್ಚಿಸಲು ಚಿಂತನೆ:

ಎಲ್ಲಾ ಕೊರೋನಾ ಕೇಸ್ ಗಳ ಜಿನೋಮ್ ಸ್ವಿಕ್ವೆನ್ಸ್ ಟೆಸ್ಟ್ ಮಾಡ್ತಿದ್ದೆವೆ. ಆ ಲ್ಯಾಬ್ ಗಳನ್ನು ಹೆಚ್ಚಿಗೆ ಮಾಡುವ ಚಿಂತನೆ ಮಾಡಿದ್ದೆವೆ. ಪರಿಣತರ ಜೊತೆ ಚರ್ಚಿಸಿ ಈಗಾಗಲೇ ಆರೋಗ, ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದೆವೆ. ಏನೆಲ್ಲಾ ಅದಕ್ಕೆ ತಯಾರಿಬೇಕು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ವರದಿ ಬರುವಂತೆ ಮಾಡುತ್ತೇವೆ ಎಂದು ತಿಳಿಸಿದರು.

ಸಿಎಂ ಬೊಮ್ಮಾಯಿವರು ಸುಳ್ಳು ಹೇಳುತ್ತಿದ್ದಾರೆ ಎನ್ನೋ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರ ಬಗ್ಗೆ ಬಹಳ ಗೌರವವಿತ್ತು. ಆದರೆ ಇತ್ತೀಚಿನ ಹೇಳಿಕೆಗಳು ನಿರಾಸೆ ತಂದಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಹೇಳಿಕೆಗೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದು ರೇಣುಕಾಚಾರ್ಯಗೆ ಟಾಂಗ್ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button