Latestಚಿಕ್ಕಮಗಳೂರುಜಿಲ್ಲಾ ಸುದ್ದಿಸುದ್ದಿ

ಬಫರ್ ಝೋನ್ ವಿರೋಧಿಸಿ ದಯಾಮರಣ ಕೋರಿದ ರೈತರು

ಚಿಕ್ಕಮಗಳೂರು: ಬಫರ್ ಝೋನ್ ಯೋಜನೆಗೆ ಭದ್ರಾ ಅರಣ್ಯದಂಚಿನ ಹಲವು ಗ್ರಾಮಗಳ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಸಾಮೂಹಿಕವಾಗಿ ದಯಾಮರಣ ಕೋರಿ ರಾಷ್ಟಪತಿಗೆ ಪತ್ರ ಬರೆದಿದ್ದಾರೆ. ಎನ್.ಆರ್ ಪುರ ತಾಲ್ಲೂಕಿನ ಸಾಲೂರು, ಹೆನ್ನಂಗಿ, ಬೆಳ್ಳಂಗಿ, ಅಳೆಹಳ್ಳಿ, ಆಡುವಳ್ಳಿ, ಕೊಳಲೆ ಮುದುಗುಣಿ, ಬಾಳೆಗದ್ದೆ, ನಂದಿಗಾವೆ, ಬೈರಾಪುರ ಗ್ರಾಮಗಳ ರೈತರು ಈ ನಿರ್ಧಾರ ತಾಳಿದ್ದಾರೆ.

ಹಿಂದಿನಿಂದಲೂ ಅನೇಕ ಹಲವು ಯೋಜನೆಗಳ ಮೂಲಕ ಜನರನ್ನು ಒಕ್ಕಲೆಬ್ಬಿಸಿ ಇದೇ ಗ್ರಾಮದಲ್ಲಿ ಪುನರ್ ವಸತಿ ಕಲ್ಪಿಸಿದ್ದ ಸರ್ಕಾರ ಮತ್ತೆ ಅಲ್ಲಿಂದ ಒಕ್ಕಲೆಬ್ಬಿಸಲು ಬಫರ್ ಝೋನ್ ರೂಪಿಸಿ ಜಾರಿಗೊಳಿಸಲು ಮುಂದಾಗಿದೆ ಎಂದು ರೈತರು, ಗ್ರಾಮಸ್ಥರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button