ಅಮಿತಾಬ್ ಟ್ವೀಟ್ ನೋಡಿ ಆತಂಕಗೊಂಡ ಅಭಿಮಾನಿಗಳು: ಬಿಗ್ ಬಿ ಟ್ವೀಟ್ನಲ್ಲಿ ಅಂತದ್ದೇನಿದೆ?

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಾಡಿರುವ ಪೋಸ್ಟ್ ಒಂದು ಅಭಿಮಾನಿಗಳನ್ನ ಚಿಂತೆಗೀಡು ಮಾಡುವಂತೆ ಮಾಡಿದೆ. ನಿನ್ನೆ ರಾತ್ರಿ 10.14ಕ್ಕೆ ಅಮಿತಾಬ್ ಟ್ವೀಟ್ ಮಾಡಿದ್ದು ಟ್ವೀಟ್ ನೋಡಿದ ಲಕ್ಷಾಂತರ ಅಭಿಮಾನಿಗಳು ಮರು ಟ್ವೀಟ್ ಮಾಡಿದ್ದಾರೆ. ಆದ್ರೆ ಅಮಿತಾಬ್ ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದ್ರಿಂದ ಅಭಿಮಾನಿಗಳು ಮತ್ತಷ್ಟು ಕಂಗಲಾಗಿದ್ದಾರೆ.
79 ವರ್ಷದ ನಟ ಅಮಿತಾಬ್ ಬಚ್ಚನ್ ತಮ್ಮ ಆರೋಗ್ಯದ ವಿಷಯದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವು ಬಾರಿ ತಮ್ಮ ಆರೋಗ್ಯದ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ್ರೆ ಮತ್ತೊಂದಷ್ಟು ಸಲ ಕೆಲವರು ಸುಳ್ಳು ಸುದ್ದಿಗಳನ್ನ ಹಂಚಿಕೊಂಡಿದ್ದರು. ಆದ್ರೆ ಈ ಬಾರಿ ಸ್ವತಃ ಅಮಿತಾಬ್ ತಮ್ಮ ಆರೋಗ್ಯದ ಕುರಿತು ಹೇಳಿಕೆಯೊಂದನ್ನ ನೀಡಿದ್ದಾರೆ.
ಅಮಿತಾಬ್ ಬಚ್ಚನ್ ತಮ್ಮ ಟ್ವಿಟರ್ ಖಾತೆಯಲ್ಲಿ heart pumping… concerned.. and the hope ಎಂದು ಟ್ವೀಟ್ ಮಾಡಿದ್ದಾರೆ. ಅಮಿತಾಬ್ ಟ್ವಿಟ್ ಮಾಡುತ್ತಿದ್ದಂತೆಯೇ ಲಕ್ಷಾಂತರ ಮಂದಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಆಗಿರುವ ಸಮಸ್ಯೆಯನ್ನ ಹೇಳಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ ಅಮಿತಾಬ್ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಇದುವರೆಗೂ ಅಭಿಮಾನಿಗಳು ಆತಂಕದಲ್ಲೇ ಇದ್ದಾರೆ.



