Breaking NewsLatestಕೊಪ್ಪಳಜಿಲ್ಲಾ ಸುದ್ದಿ

ಶಿವರಾತ್ರಿ ಹಬ್ಬಕ್ಕೆ ಕೊಪ್ಪಳದಲ್ಲಿ ಹಣ್ಣಿನ ಮೇಳ !

ಕೊಪ್ಪಳ: ಶಿವರಾತ್ರಿ ಹಬ್ಬ ಅಂದ್ರೆ ಬೆಳಗ್ಗೆಯಿಂದ ಉಪವಾಸವಿದ್ದು ರಾತ್ರಿ ಸಂಜೆ ಹಣ್ಣುಗಳನ್ನು ತಿನ್ನುವ ಮೂಲಕ ಉಪವಾಸ ಮುಕ್ತಾಯಗೊಳಿಸುತ್ತಾರೆ. ಹೀಗಾಗಿ ಶಿವರಾತ್ರಿ ಹಬ್ಬದಲ್ಲಿ ಹಣ್ಣುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆಯು ಹಣ್ಣುಗಳ ಮೇಳ ಹಮ್ಮಿಕೊಂಡಿದೆ.

ಹೀಗೆ ಮಾರುಕಟ್ಟೆ ಸುತ್ತಮುತ್ತ ವಿವಿಧ ಬಗೆಯ ಕಲ್ಲಂಗಡಿ, ದ್ರಾಕ್ಷಿ,ಕರಬೂಜ ಹಣ್ಣುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಶಿವರಾತ್ರಿ ಪ್ರಯುಕ್ತ ಕಲ್ಲಂಗಡಿ, ದ್ರಾಕ್ಷಿ, ಕರಬೂಜ ಹಣ್ಣುಗಳ ಮೇಳವನ್ನು ಆಯೋಜಿಸಿದೆ.ನಾಲ್ಕು ದಿನಗಳ ಕಾಲ ಹಣ್ಣಿನ ಮೇಳ ನಡೆಯಲಿದೆ. ಈ ಮೇಳದಲ್ಲಿ ಹಣ್ಣುಗಳ ಜೊತೆಗೆ ದ್ರಾಕ್ಷಿಯಿಂದ ತಯಾರಿಸಿದ ವೈನ್ ಹಾಗೂ ಶುದ್ದ ಜೇನುತುಪ್ಪ ಮಾರಾಟಕ್ಕೆ ಇಡಲಾಗಿದೆ.

ಇನ್ನು ಹಣ್ಣಿನ ಮೇಳದಲ್ಲಿ ಜಿಲ್ಲೆಯಾದ್ಯಂತ ಹತ್ತಾರು ರೈತರು ಪಾಲ್ಗೊಂಡಿದ್ದಾರೆ. ಇವರೆಲ್ಲ ತಮ್ಮ ತೋಟದಲ್ಲಿ ಬೆಳೆದ ಹಣ್ಣುಗಳನ್ನು ತಂದು ಇಲ್ಲಿಗೆ ಮಾರಾಟ ಮಾಡ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button