Latestಮನರಂಜನೆಸಿನಿಮಾಸೆಲೆಬ್ರಿಟಿ

ನಟ ಸಿದ್ಧಾರ್ಥ್ ಟ್ವಿಟರ್ ಖಾತೆ ಬ್ಲಾಕ್ ಮಾಡಲು ಮಹಿಳಾ ಆಯೋಗ ಮನವಿ

ಶಟಲ್ ಆಟಗಾರ್ತಿ, ಭಾರತೀಯ ಜನತಾ ಪಕ್ಷದ ನಾಯಕಿ ಸೈನಾ ನೆಹ್ವಾಲ್ ಮಾಡಿದ ಟ್ವೀಟ್​ಗೆ ನಟ ಸಿದ್ಧಾರ್ಥ್​ ಮಾಡಿದ ಪ್ರತಿಕ್ರಿಯೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸಿದ್ದಾರ್ಥ್ ಟ್ವಿಟರ್​ ಖಾತೆಯನ್ನ ನಿರ್ಬಂಧಿಸುವಂತೆ ಟ್ವಿಟರ್​ಗೆ ರಾಷ್ಟ್ರೀಯ ಮಹಿಳಾ ಆಯೋಗ ಪತ್ರ ಬರೆದಿದೆ.
ಎನ್​ಸಿಡಬ್ಲ್ಯೂ ಇಂಡಿಯಾ ಇದರ ಬಗ್ಗೆ ಗಮನ ಹರಿಸಿದೆ. ಅಧ್ಯಕ್ಷೆ ರೇಖಾಶರ್ಮಾ ಅವರು ಈ ವಿಷಯದಲ್ಲಿ ತನಿಖೆ ನಡೆಸಲು ಹಾಗೂ ಎಫ್​ಐಆರ್ ದಾಖಲಿಸಲು ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದಾರೆ.
ಸಿದ್ಧಾರ್ಥ್ ಅವರ ಖಾತೆಯನ್ನು ನಿರ್ಬಂಧಿಸಲು ಹಾಗೂ ಅಂತಹ ಟೀಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಎನ್​ಸಿಡಬ್ಲ್ಯೂ ಟ್ವಿಟರ್ ಇಂಡಿಯಾಗೆ ಪತ್ರ ಬರೆದಿದೆ ಎಂದು ಆಯೋಗವು ಟ್ವಿಟರ್​ನಲ್ಲಿ ಹೇಳಿದೆ.

ಎನ್​ಸಿಡಬ್ಯ್ಲೂ ಟ್ವೀಟ್​ಗೆ ಪ್ರತಿಕ್ರಿಯಿಸಿದ ರೇಖಾ ಶರ್ಮಾ ಈ ಮನುಷ್ಯನಿಗೆ ಸರಿಯಾದ ಪಾಠ ಕಲಿಸಬೇಕು. ಈ ವ್ಯಕ್ತಿಯ ಖಾತೆ ಇನ್ನೂ ಏಕೆ ಅಸ್ತಿತ್ವದಲ್ಲಿದೆ ಟ್ವಿಟರ್​ ಇಂಡಿಯಾ? ಇದನ್ನು ಸಂಬಂಧಿತ ಪೊಲೀಸರಿಗೆ ತಿಳಿಸುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

https://twitter.com/Actor_Siddharth/status/1480449534190702594

ಸಿದ್ಧಾರ್ಥ್ ಟ್ವೀಟ್​ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಿದ್ಧಾರ್ಥ್ ಸ್ಪಷ್ಟೀಕರಣ ನೀಡಿದ್ದಾರೆ. ಕಾಕ್ ಹಾಗೂ ಬುಲ್ ಎಂದು ಉಲ್ಲೇಖವಾಗಿದೆ. ಇದನ್ನು ಬೇರೆ ರೀತಿಯಲ್ಲಿ ಓದುವುದು ಸರಿಯಲ್ಲ. ಅಗೌರವಯುತವಾದ ಯಾವುದನ್ನೂ ಉದ್ದೇಶಿಸಿಲ್ಲ, ಹೇಳಿಲ್ಲ ಅಥವಾ ಸೂಚಿಸಲಾಗಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button