Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯರಾಮನಗರಸುದ್ದಿ

ತಮಿಳುನಾಡಿನಲ್ಲಿ ಬಿಜೆಪಿ ಶಕ್ತಿಹೆಚ್ಚಿಸಲು ರಾಜ್ಯಕ್ಕೆ ಮೋಸ: ಸಿದ್ದರಾಮಯ್ಯ

ರಾಮನಗರ: ತಮಿಳುನಾಡಿನಲ್ಲಿ ಮತ ಹೆಚ್ಚಿಸಿಕೊಳ್ಳಲು ಬಿಜೆಪಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗಲ್ಲ ಎಂದರು. ತಮಿಳುನಾಡು‌ ಹಸಿರು ಪೀಠದ ಮುಂದೆ ಕೇಸ್ ಹಾಕಿಕೊಂಡಿದೆ. ಅದು ಬಿಟ್ರೆ ಸುಪ್ರೀಂ ಮುಂದೆ ಯಾವುದೇ ವ್ಯಾಜ್ಯ ಇಲ್ಲ. ಕಾನೂನಾತ್ಮಕವಾಗಿ ಯಾವುದೇ ಅಡೆತಡೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾವು ಸೇರಿದಂತೆ 30 ಮಂದಿ ವಿರುದ್ಧ  ಕೇಸ್ ಹಾಕಿದ್ದಾರೆ‌. ಇನ್ನಷ್ಟು ಜನರ ಮೇಲೆ ಕೇಸ್ ಹಾಕಿದ್ರೆ ‌ನಿಮ್ಮಷ್ಟು‌ ಮುರ್ಖರು ಇಲ್ಲ.  ತಮಿಳುನಾಡಿನಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಬಿಜೆಪಿ ನಾಯಕರ ಮಾತುಗಳು ಅದೆ ರೀತಿಯಲ್ಲಿ ಇವೆ. ನಾವು ಕರ್ನಾಟಕದ ಜನರಿಗೆ ಅನ್ಯಾಯ ಆಗಲು ಬಿಡಲ್ಲ ಎಂದೂ ಸಿದ್ದರಾಮಯ್ಯ ಹೇಳಿದರು.

ಕೊರೋನಾ ಬಿಜೆಪಿಗಿಲ್ವಾ?

ನಮಗೆ ಜಂಬ, ಪ್ರತಿಷ್ಠೆ ಏನು ಇಲ್ಲ. ಎರಡು ವರ್ಷಗಳ ಕಾಲ ಯೋಜನೆಗೆ ಕಾದಿದ್ದೇವೆ. ಈಗ ಪಾದಯಾತ್ರೆ ಮಾಡುತ್ತಿದ್ದೇವೆ. ಕೋರೋನ ಬಿಜೆಪಿಗರಿಗೆ ಇಲ್ವಾ, ಮೊನ್ನೆಯವೆರೆಗೂ ಮೋದಿ ರ್ಯಾಲಿ ಮಾಡಿದ್ರು‌.  ನಮ್ಮ ಕಾರ್ಯಕರ್ತರಿಗೆ ಕೊರೋನಾ ರೂಲ್ಸ್ ‌ಫಾಲೂ‌ ಮಾಡಲು ಹೇಳಿದ್ದೇವೆ. ರೋಗ ತಡೆಯುವ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಲಾಕ್ ಡೌನ್ ಮಾಡಿ ಜನರು ಬೀದಿಗೆ ಬಂದಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ಧಾಳಿ ನಡೆಸಿದರು.

ನಾನು ಇಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಬಂದಿದ್ದಾರೆ. ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಜನರಿಗೆ ಕುಡಿಯೂ ನೀರು ನಿವಾರಣೆಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಕೇಸ್ ಹಾಕಿದರೇ ಹಾಕಿಕೊಳ್ಳಲಿ ನಾವು ಇದಕ್ಕೆಲ್ಲ ಹೆದರುವುದಿಲ್ಲ.

ಎಲ್ಲಾ ಕಡೆ ಬಿಜೆಪಿ ಸಭೆ ಸಮಾರಂಭ ಹೆಚ್ಚಾಗಿ ನಡೆಯುತ್ತಿವೆ. ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೆಗಲ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಂಡಿಲ್ವಾ? ಅವರ ಮೇಲೆ  ಯಾವ ಕೇಸ್ ಹಾಕಿದ್ದೀರಾ? ಶೋಭಾ ಕರಂದ್ಲಾಜೆ ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲಾ ಎಂದು ಕಿಡಿಕಾರಿದರು.

Spread the love

Related Articles

Leave a Reply

Your email address will not be published. Required fields are marked *

Back to top button