Breaking NewsLatestಆರೋಗ್ಯರಾಜ್ಯರಾಷ್ಟ್ರೀಯಸುದ್ದಿ

ಕೋವಿಡ್ ಸೌಮ್ಯ ಲಕ್ಷಣ, ಲಕ್ಷಣರಹಿತರ ತಪಾಸಣೆ ಅಗತ್ಯವಿಲ್ಲ: ಐಸಿಎಂಅರ್

ನವದೆಹಲಿ: ಕೊರೋನಾ ಸೌಮ್ಯ ಲಕ್ಷಣ ಮತ್ತು ಲಕ್ಷಣ ಇಲ್ಲದೇ ಇರುವವರ ಸಂಪರ್ಕಕ್ಕೆ ಬಂದವರನ್ನು ಇನ್ನು ಮುಂದೆ ತಪಾಸಣೆ ಮಾಡುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ. ಈ ಕುರಿತು ಹೊಸ ಮಾರ್ಗಸೂಚಿ ಪ್ರಕಟಿಸಿರುವ ಐಎಸ್ ಎಂಅರ್, ಕೋವಿಡ್ ಸಂಪರ್ಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರು, ವೃದ್ಧರು ಮತ್ತು ಇತರೆ ರೋಗಗಳಿಂದ ಬಳಲುತ್ತಿರುವವರು ಅಥವಾ ಕೊರೋನಾದ ಗಂಭೀರ ಸ್ವರೂಪದ ಲಕ್ಷಣಗಳು ಇರುವವರ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಸ್ಪಷ್ಟಪಡಿಸಿದೆ.

ಕೊರೊನಾದ ಗಂಭೀರ ಲಕ್ಷಣಗಳು ಇರುವವರ ಸಂಪರ್ಕಕ್ಕೆ ಬಂದವರು, ಅದರಲ್ಲೂ 60ವರ್ಷ ಮೇಲ್ಪಟ್ಟವರು, ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಶ್ವಾಸಕೋಶ, ಮೂತ್ರಪಿಂಡ ಕಾಯಿಲೆ ಸೇರಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರು ಕೊವಿಡ್​ 19 ಟೆಸ್ಟ್​ ಮಾಡಿಸಿಕೊಳ್ಳಬೇಕು ಎಂದು ಹೊಸ ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button