Latestರಾಷ್ಟ್ರೀಯಸುದ್ದಿ

ದೆಹಲಿಯಲ್ಲಿ ಹೋಮ್​​ ಕ್ವಾರಂಟೈನಲ್ಲಿರುವರಿಗೆ ಆನ್​​ಲೈನ್​​​​ ಯೋಗ ತರಗತಿ: ಸಿಎಂ ಅರವಿಂದ್ ಕೇಜ್ರಿವಾಲ್​​​

ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿಗೆ ಒಳಗಾಗಿ ನಂತರ ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವರಿಗೆ ಆನ್‌ಲೈನ್ ಯೋಗ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​​ ಘೋಷಿಸಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೋವಿಡ್​​ಗೆ ಒಳಗಾದವರು ಪ್ರಾಣಾಯಾಮ ಮತ್ತು ಯೋಗದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಅವರಿಗೆ ಆನ್‌ಲೈನ್ ಮೂಲಕ ಯೋಗ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಹೋಮ್ ಕ್ವಾರಂಟೈನ್ ನಲ್ಲಿರುವ ಜನರು ಯೋಗ ತರಬೇತುದಾರರೊಂದಿಗೆ ಮನೆಯಲ್ಲಿ ಕುಳಿತು ಯೋಗ ಮಾಡಲು ಸಾಧ್ಯವಾಗುತ್ತದೆ ಯೋಗ ತರಬೇತುದಾರರ ಬೃಹತ್ ತಂಡವನ್ನು ಸಿದ್ಧಪಡಿಸಲಾಗಿದೆ. ಯಾವ ಯೋಗಗಳು ಕೊರೊನಾಗೆ ಸಂಬಂಧಿಸಿವೆ, ಇದಕ್ಕಾಗಿ ಯಾವ ಪ್ರಾಣಾಯಾಮ ಮಾಡುವುದು ಮುಖ್ಯ ಎಂಬ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ ಎಂದರು.

ಬೆಳಗ್ಗೆ 6 ರಿಂದ 11ರವರೆಗೆ ತಲಾ ಒಂದು ಗಂಟೆಯ 5 ಯೋಗ ತರಗತಿಗಳು ನಡೆಯಲಿವೆ. ನಂತರ ಸಂಜೆ 4 ರಿಂದ 7 ರವರೆಗೆ 3 ಯೋಗ ತರಗತಿಗಳು ನಡೆಯಲಿವೆ. ಒಂದು ದಿನದಲ್ಲಿ ಒಟ್ಟು 8 ತರಗತಿಗಳು ಇರುತ್ತವೆ. 40 ಸಾವಿರ ಜನರು ಒಟ್ಟಾಗಿ ಯೋಗ ತರಗತಿಗಳನ್ನು ತೆಗೆದುಕೊಳ್ಳಬಹುದು, ನಮ್ಮಲ್ಲಿ ತುಂಬಾ ಯೋಗ ತರಬೇತುದಾರರಿದ್ದಾರೆ. ಆದರೆ ಒಂದು ತರಗತಿಯಲ್ಲಿ ಕೇವಲ 15 ಜನರು ಒಟ್ಟಾಗಿ ಯೋಗ ಮಾಡುತ್ತಾರೆ ಎಂದು ತಿಳಿಸಿದರು.

ಖಾಸಗಿ ಕಚೇರಿಗಳಿಗೆ ಮನೆಯಿಂದ ಕೆಲಸ :

ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ನಿಬಂಧನೆ ವಿಧಿಸುವುದು ಅನಿವಾರ್ಯವಾಗಿದೆ. ಎಲ್ಲಾ ಖಾಸಗಿ ಕಚೇರಿಗಳನ್ನು ಮುಚ್ಚಲು ಮತ್ತು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಕಳುಹಿಸಲು ಆದೇಶಿಸಲಾಗಿದೆ.

ಅಗತ್ಯ ಸೇವೆಗಳನ್ನು ಒದಗಿಸುವವರು ಮಾತ್ರ ಹೊಸ ನಿಯಮಕ್ಕೆ ವಿನಾಯಿತಿ ನೀಡುತ್ತಾರೆ ಎಂದು ದೆಹಲಿ ವಿಪತ್ತು ನಿರ್ವಹಣಾ ಸಂಸ್ಥೆ (ಡಿಡಿಎಂಎ) ಸಭೆಯಲ್ಲಿ ನಿರ್ಧರಿಸಲಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ಸಹ ಮುಚ್ಚಲಾಗಿದೆ. ಟೇಕ್‌ ಅವೇಗಳು ಮತ್ತು ಹೋಮ್ ಡೆಲಿವರಿಗಳನ್ನು ಮಾತ್ರ ಅನುಮತಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button