ಹು-ಧಾ ಮಹಾನಗರ ಪಾಲಿಕೆಯ ಮೇಲೆ ಕಣ್ಣಿಟ್ಟ ಎಎಪಿ : ಚುನಾವಣೆ ಎದುರಿಸಲು ಪಕ್ಷದಿಂದ ಸಕಲ ಸಿದ್ಧತೆ

ಧಾರವಾಡ : ಆಮ್ ಆದ್ಮಿ ಪಕ್ಷ ಈಗಾಗಲೇ ತನ್ನ ವಿನೂತನ ಪ್ರಯತ್ನದೊಂದಿಗೆ ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು, ದೆಹಲಿಯಲ್ಲಿ ತನ್ನ ಆಡಳಿತ ವೈಖರಿಯಿಂದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ನಿಂತಿದೆ. ಅಲ್ಲದೇ ಸ್ಥಳಿಯ ಚುನಾವಣೆಯಲ್ಲೂ ತನ್ನ ಶಕ್ತಿ ಪ್ರದರ್ಶನವನ್ನು ತೋರಿಸಿದ್ದು, ಈಗ ಆಮ್ ಆದ್ಮಿ ಪಕ್ಷದ ಕಣ್ಣು ಉತ್ತರ ಕರ್ನಾಟಕದ ಅವಳಿನಗರದ ಕಡೆಗೆ ನೆಟ್ಟಿದೆ. ಹೌದು ಹುಬ್ಬಳ್ಖಿ ಧಾರವಾಡ ಮಹಾನಗರ ಪಾಲಿಕೆಯ ಮೇಲೆ ಕಣ್ಣು ಇಟ್ಟಿರುವ ಎಎಪಿ ಪಕ್ಷವು ಸದ್ದಲ್ಲದೇ ಚುನಾವಣೆ ತಯಾರಿ ನಡೆಸುತ್ತಿದೆ.
ಕಳೆದ ಆರೆಳು ತಿಂಗಳಿಂದ ಪಾಲಿಕೆ ಚುನಾವಣೆ ದೃಷ್ಠಿಕೊನದಲ್ಲಿ ಇಟ್ಟುಕೊಂಡು, ಅವಳಿನಗರದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸದಾ ಸಂಚಾರಿಸುತ್ತಾ, ಪಕ್ಷದ ಸಂಘಟನೆಗೆ ಮುಂದಾಗಿದೆ. ಜಿಲ್ಲಾ ಮಟ್ಟದ ನಾಯಕರು, ಈಗ ದೆಹಲಿ ಮಟ್ಟದ ನಾಯಕರನ್ನು ಅವಳಿನಗರಕ್ಕೆ ಕರೆಯಿಸಿಕೊಳ್ಳುವ ಮೂಲಕ ಪಾಲಿಕೆ ಚುನಾವಣೆಯ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಅಷ್ಟೆಯಲ್ಲದೆ ಪಾಲಿಕೆಯ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ, ಅರವಿಂದ ಕೇಜ್ರಿವಾಲ್ ಅವರ ಮಾಧ್ಯಮ ಸಲಹೆಗಾರರಾದ ಪೃಥ್ವಿ ರೆಡ್ಡಿಯವರು ಕಳೆದ ವಾರವಷ್ಟೇ ಘೋಷಣೆ ಮಾಡಿದ್ದಾರೆ.
ವಿಶ್ವ ದರ್ಜೆಯ ಮಾದರಿಯ ನಗರ ಪರಿಕಲ್ಪನೆಯೊಂದಿಗೆ ಚುನಾವಣೆಗೆ ಸಿದ್ಧತೆ
ಈಗಾಗಲೇ ಮಾಧ್ಯಮಗೋಷ್ಠಿ ಮೂಲಕ ಘೋಷಣೆ ಮಾಡಿಕೊಂಡಿರುವ ಆಪ್ ಪಕ್ಷವು, ಅವಳಿ ನಗರವನ್ನು ವಿಶ್ವ ದರ್ಜೆ ಮಾದರಿ ನಗರ ಪರಿಕಲ್ಪನೆಯನ್ನು ಘೋಷಿಸಿದ್ದಾರೆ. ಇದರ ಜೊತೆಗೆ ಪ್ರತಿ ವಾರ್ಡ್‌ನಿಂದ ಚುನಾವಣೆಯ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಪಡೆದುಕೊಳ್ಳುತ್ತಿರುವ ಪಕ್ಷದ ಮುಖಂಡರು. ಇಲ್ಲಿಯವರೆಗೆ ಸುಮಾರು 200ಜನರು ಪಾಲಿಕೆ ಚುನಾವಣೆಗೆ ಪಕ್ಷದಿಂದ ಕಣಕ್ಕೆ ಇಳಿಯಲು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದ್ದು, ಅವಳಿನಗರದ ವಿದ್ಯುತ್, ಚರಂಡಿ, ರಸ್ತೆ ಸೇರಿದಂತೆ ಮಾದರಿಯ ನಗರಗಳನ್ನಾಗಿ ರೂಪಿಸಲು ಬೇಕಾಗುವ ಸಕಲ ಸೌಲಭ್ಯಗಳು ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ, ಸಮಾಜ ಸೇವೆಯೇ ಮುಕ್ಯ ಉದ್ದೇಶ ಇಟ್ಟುಕೊಂಡು ನಾವು ಚುನಾವಣೆಗೆ ಸ್ಪರ್ಧಿಸುತ್ತೆವೆ ಎಂದು ಪಕ್ಷದ ಸ್ಥಳಿಯ ನಾಯಕರಾದ ಹಾಗೂ ಜಿಲ್ಲಾಧ್ಯಕ್ಷರಾದ ಸಂತೋಷ ನರಗುಂದ ಘೋಷಣೆ ಮಾಡಿದ್ದಾರೆ.
ಈಗಾಗಲೇ ಅವಳಿನಗರದ ಪಾಲಿಕೆ ಚುನಾವಣೆ ಎದುರಿಸಲು, ದೆಹಲಿ ಮಟ್ಟದ ಎಎಪಿ ಪಕ್ಷದ ವಿಶೇಷ ತಂಡವೊಂದು ಹು-ಧಾ ದಲ್ಲಿ ಬೀಡು ಬಿಟ್ಟಿದ್ದು, ಪಾಲಿಕೆ ಚುನಾವಣೆ ಗೆಲ್ಲಲು ಕಾರ್ಯತಂತ್ರವನ್ನು ಹೆಣೆಯುತ್ತಿದೆ. ಇನ್ನೂ ಪ್ರತಿಯೊಂದು ವಾರ್ಡನಿಂದ ಸುಮಾರು ಎರಡರಿಂದ ಮೂರು ಅಭ್ಯರ್ಥಿಗಳು ಚುನಾವಣೆಗೆ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದು, ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಅವರಲ್ಲಿ ಯಾರು ಜನಸೇವೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆವಹಿಸುತ್ತಾರೆ ಹಾಗೂ ಜನರ ಸಮಸ್ಯೆಗಳಿಗೆ ಯಾವ ರೀತಿಯ ಸ್ಪಂದನೆ ನೀಡುತ್ತಾರೆ ಎಂಬೆಲ್ಲವನ್ನು ಪರಿಶೀಲಿಸಿ ಅಭ್ಯರ್ಥಿಗಳಿಗೆ ಪಕ್ಷದ ವತಿಯಿಂದ ಚುನಾವಣೆ ಸ್ಪರ್ಧೆಗೆ ಅನುಮತಿ ನೀಡಲಾಗುವುದು ಎಂದು ತಿಳಿದು ಬಂದಿದೆ.
ಈಗ ವಿವಿಧ ಪಕ್ಷಗಳ ಮುಖಂಡರನ್ನು ಸೆಳೆಯ ಆಮ್ ಆದ್ಮಿ ಪಕ್ಷ ಯತ್ನಿಸುತ್ತಿದ್ದು, ಅದರ ಮೊದಲ ಪ್ರಯತ್ನವಾಗಿ ಕಳೆದ ವಾರವಷ್ಟೇ, ಮಾಜಿ ಕಾರ್ಪೋರೇಟರ್ ಎಸ್.ಟಿ. ಪೂಜಾರ್, ಸಮಾಜ ಸೇವಕ ಗೋಪಾಲ ಕುಲಕರ್ಣಿ ಅವರು ಜಿಲ್ಲಾಧ್ಯಕ್ಷ ಸಂತೋಷ ನರಗುಂದ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇವರ ಜೊತೆಗೆ ಇನ್ನೂ ಹಲವು ಮುಖಂಡರನ್ನು ಹಾಗೂ ಸಮಾಜ ಸಮಾಜ ಸೇವಕರನ್ನು ಸೆಳೆಯಲು ಪಕ್ಷದ ಹಲವು ಮುಖಂಡರು ನಿರಂತರ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ರಾಷ್ಟ್ರ ರಾಜ್ಯಧಾನಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ಮುಖಂಡರ ಕಣ್ಣು, ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಲೆ ಬಿದಿದ್ದು, ಅವಳಿ ನಗರದ ಪಾಲಿಕೆಯ ಚುನಾವಣೆ ಗೆಲ್ಲುವ ಮೂಲಕ ತನ್ನ ಅಧಿಕಾರದ ಖಾತೆ ತೆರೆಯಲು ಸರ್ವ ಪ್ರಯತ್ನ ನಡೆಸಿದ್ದು, ಆದರೆ ಅದೂ ಎಷ್ಟರ ಮಟ್ಟಿಗೆ ಸಕ್ಸಸ್ ಕಾಣುತ್ತಾರೆಯೇ ಎಂಬುವುದು ಕಾದು ನೋಡಬೇಕಾಗಿದೆ.
ದೆಹಲಿಯಲ್ಲಿ ಈಗಾಗಲೇ ಎಎಪಿ ಪಕ್ಷ 34 ಶಾಸಕರು ಇದ್ದಾರೆ. ಕರ್ನಾಟಕದಲ್ಲಿ ವಿರಾ



