ಅಂಬರೀಶ್ ಹೆಸರೇ ಪವರ್ ಫುಲ್!

ಪೂರ್ಣ ವಿ-ರಾಮ
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅಂಬರೀಶ್ ಬಗ್ಗೆ ಮಾತನಾಡೋ ಮುನ್ನ ಬಾರಿ ಯೋಚಿಸಿ ಎಂದಿದ್ದಾರೆ. ಸುಮಲತಾ ಅಂಬರೀಶ್ ಹಾಗೂ ಹೆಚ್ ಡಿ ಕುಮಾರಸ್ವಾಮಿ ನಡುವಿನ ಡ್ಯಾಮ್ ಜಗಳದಲ್ಲಿ ಅನಗತ್ಯವಾಗಿ ಅಂಬರೀಶ್ ಹೆಸರು ಎಳೆತರಬೇಡಿ ಎಂದಿದ್ದಾರೆ ರಾಕ್!
ಅಂಬರೀಶ್ ಹಾಗೆ ಬದುಕಿದ್ದರು!
ಡಾಕ್ಟರ್ ರಾಜ್ ಸಾವಿನ ಸಂದರ್ಭಗಳಲ್ಲಿ ಇರಬಹುದು, ವಿಷ್ಣುವರ್ಧನ್ ಇಹಲೋಕ ಯಾತ್ರೆ ಮುಗಿಸಿದ ಟೈಮ್ ಇರಬಹುದು, ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಅಂತ ಎದುರಾದಾಗ ಇರಬಹುದು, ಫಿಲಂ ಛೇಂಬರ್ ಸೇರಿದಂತೆ ಯಾವುದೇ ಕಲಾವಿದರ ನಡುವೆ ಇರುವ ಜಗಳ ಇರಬಹುದು, ರೆಬಲ್ ಸ್ಟಾರ್ ಯಾವತ್ತೂ ನ್ಯಾಯದ ಪರ ಇದ್ದವರು. ರಾಜಕೀಯ ವಲಯದಲ್ಲಿ ಸಹ ಅವರು ಪಕ್ಷಪಾತವಾಗಿ ಗೆಳೆಯರ ಬಳಗವನ್ನೇ ಹೊಂದಿದ್ದವರು. ಇಲ್ಲಿಯೇ ಕೂತು ದಿಲ್ಲಿಯವರೆಗೆ ಲಿಂಕ್ ಇದ್ದವರು. ಅಂಥ ಅಂಬರೀಶ್ ಎಂಬ ದೇಶಾದ್ಯಂತ ರೀಚ್ ಇರುವ ವ್ಯಕ್ತಿಯ ಸಾವಿನ ವಿಷಯದಲ್ಲಿ ರಾಜಕೀಯ ಮಾಡಿದ್ದು ಎಷ್ಟು ಸರಿ?
ಅಂಬಿ ಅಂತಿಮ ನಮನ ಮೂರು ದಿನ ನಡೆದಿತ್ತು!
ಅಂಬರೀಶ್ ತೀರಿಕೊಂಡಾಗ ಕುಮಾರಸ್ವಾಮಿ ಇಲ್ಲದೇ ಇಲ್ಲದೇ ಇದ್ದಿದ್ದರೆ ಅವರ ಅಂತಿಮ ಸಂಸ್ಕಾರ ಅಷ್ಟು ವ್ಯವಸ್ಥಿತವಾಗಿ ಆಗುತ್ತಲೇ ಇರಲಿಲ್ಲ ಎಂಬ ವಿಷಯಕ್ಕೆ ರಾಕ್ ಲೈನ್ ವೆಂಕಟೇಶ್ ಗುಡುಗಿದ್ದು ಒಂದರ್ಥದಲ್ಲಿ ಸರಿಯಾಗಿಯೇ ಇದೆ. ಅಲ್ಲಿ ಕುಮಾರಸ್ವಾಮಿ ಅವರಷ್ಟೇ ಅಲ್ಲ, ಒಬ್ಬ ಕಾಮನ್ ಮ್ಯಾನ್ ಇದ್ದಿದ್ದರೂ ಅದಕ್ಕಿಂತ ಚೆನ್ನಾಗಿ ವ್ಯವಸ್ಥೆ ಮಾಡುತ್ತಿದ್ದರು ಎನ್ನುವುದು ರಾಕ್ ಲೈನ್ ವೆಂಕಟೇಶ್ ಒನ್ ಲೈನ್ ವಾದ!
