ವಿಜಯ್ ದೇವರಕೊಂಡ ಜೊತೆ ಅದೃಷ್ಟ ಪರೀಕ್ಷೆಗೆ ಮುಂದಾದ ಜಾಹ್ನವಿ

ವಿಜಯ್ ದೇವರಕೊಂಡ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೂಪರ್ ಹಿಟ್ ಆಗ್ತಿವೆ. ಸದ್ಯ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ವಿಜಯ್ ದೇವರಕೊಂಡ ಬಾಲಿವುಡ್ನಲ್ಲೂ ಸದ್ದು ಮಾಡೋಕೆ ರೆಡಿಯಾಗಿದ್ದಾರೆ. ಅತ್ತ ವಿಜಯ್ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋಕೆ ಮುಂದಾಗಿದ್ರೆ, ಇತ್ತ ನಟಿ ಜಾಹ್ನವಿ ಕಪೂರ್ ವಿಜಯ್ ದೇವರಕೊಂಡ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.
ಪೆಲ್ಲಿ ಚೂಪುಲು ಚಿತ್ರದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ವಿಜಯ್ ದೇವರಕೊಂಡ ನೋಡ ನೋಡ್ತಿದ್ದಂಗೆ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ್ರು. ಟಾಲಿವುಡ್ ಜೊತೆಗೆ ಕಾಲಿವುಡ್ ಚಿತ್ರದಲ್ಲೂ ಕಾಣಿಸಿಕೊಂಡಿರೋ ವಿಜಯ್ ಬಾಲಿವುಡ್ಗೂ ಎಂಟ್ರಿಕೊಡೋಕೆ ರೆಡಿಯಾಗಿದ್ದಾರೆ. ಈಗಾಗ್ಲೆ ವಿಜಯ್ ನಟನೆಯ ಲೈಗರ್ ಚಿತ್ರವನ್ನ ನಿರ್ದೆಶಕ ಕರಣ್ ಜೋಹರ್ ಹಿಂದಿಯಲ್ಲೂ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ.
ಬಾಲಿವುಡ್ಗೆ ಎಂಟ್ರಿಕೊಡ್ತಿರೋ ವಿಜಯ್ಗೆ ಜೋಡಿಯಾಗಿ ಕಾಣಿಸಿಕೊಳ್ತಿರೋದು ನಟಿ ಜಾಹ್ನವಿ ಕಪೂರ್. ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಆದ್ರೆ ಜಾಹ್ನವಿಗೆ ಹೇಳಿಕೊಳ್ಳುವ ಮಟ್ಟಿಗಿನ ಖ್ಯಾತಿ ಸಿಕ್ಕಿಲ್ಲ. ಧಡಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಜಾಹ್ನವಿ ಬಳಿಕ ಗುಂಜನ್ ಸಕ್ಸೇನ, ರೂಹಿ ಸಿನಿಮಾಗಳಲ್ಲಿ ನಟಿಸಿದ್ರು ಹೇಳಿಕೊಳ್ಳುವ ಮಟ್ಟಿಗಿನ ಸಕ್ಸಸ್ ಸಿಗಲಿಲ್ಲ. ಹೀಗಾಗಿ ಜಾಹ್ನವಿ ಒಂದೊಳ್ಳೆ ಸಿನಿಮಾಗಾಗಿ ಕಾಯುತ್ತಿದ್ದು ವಿಜಯ್ ದೇವರಕೊಂಡ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ನಟಿಸಲು ಜಾಹ್ನವಿಗೆ ಆಫರ್ ನೀಡಲಾಗಿತ್ತಂತೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಕಾಲ ಕೂಡಿ ಬಂದಿದ್ದು ವಿಜಯ್ ಜೊತೆ ನಟಿಸಲು ಜಾಹ್ನವಿ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.



