ಮನರಂಜನೆಸಿನಿಮಾಸೆಲೆಬ್ರಿಟಿ

Sai Dharam Tej: ಬೈಕ್ ಅಪಘಾತಕ್ಕೀಡಾದ ನಟ ಸಾಯಿ ಧರ್ಮ್ ತೇಜ್

ಮೆಗಾಸ್ಟಾರ್ ಚಿರಂಜೀವಿ ಅವರ ಸೋದರಳಿಯ ಮೆಗಾ ಹೀರೋ ಸಾಯಿ ಧರ್ಮ್ ತೇಜ್ ಅವರು ಸೆಪ್ಟೆಂಬರ್ 10ರ ರಾತ್ರಿ ಸುಮಾರು 8.30ಕ್ಕೆ ಹೈದರಾಬಾದ್ ನಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ನಟ ಸಾಯಿ ಧರ್ಮ್ ತೇಜ್ ಅವರು ರಾತ್ರಿ ಮೋಟಾರ್ ಬೈಕ್ ನಲ್ಲಿ ಹೋಗುತ್ತಿರುವಾಗ ಹೈದರಾಬಾದ್ ನ ಮಾದಾಪುರ ಕೇಬಲ್ ಸೇತುವೆಯ ಬಳಿ ಅಪಘಾತಕ್ಕೀಡಾಗಿದೆ. ನಟನಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಅವರನ್ನು ಮೆಡಿಕೊವರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರನ್ನು ಅಪೊಲೊ ಆ್ಪತ್ರೆಗೆ ಕರೆದೊಯ್ಯಲಾಗಿದೆ.

ಅಲ್ಲಿ ವೈದ್ಯರ ತಂಡ ನಟನಿಗೆ ಚಿಕಿತ್ಸೆ ನೀಡಿದ್ದಾರೆ. ಮತ್ತು ಅವರು ಮೂಳೆ ಮುರಿತಕ್ಕೊಳಗಾಗಿದ್ದು, ದೇಹದ ಕೆಲವು ಭಾಗಗಳಲ್ಲಿ ಗಾಯಗಳಾಗಿವೆ ಎನ್ನಲಾಗಿದೆ. ಈಗ ನಟನ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಹಾಗೆ ರಾಯದುರ್ಗ ಪೊಲೀಸರು ನಟನ ನಿರ್ಲಕ್ಷ್ಯ ಮತ್ತು ಅತಿಯಾದ ವೇಗದಿಂದ ಬೈಕು ಚಲಾಯಿಸಿದ ಕಾರಣ ಅಪಘಾತವಾಗಿದ್ದ ಕಾರಣ ನಟನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button