ಮನರಂಜನೆಸೆಲೆಬ್ರಿಟಿ

ಹೊಸ ಕಾರು ಖರೀದಿಸಿದ ನಟ ಜೂ.ಎನ್ ಟಿಆರ್ ನೇರವಾಗಿ ಹೋಗಿ ಭೇಟಿ ಮಾಡಿದ್ದು ಯಾರನ್ನ ಗೊತ್ತಾ?

ಸಿನಿಮಾ ಸ್ಟಾರ್ ಗಳಿಗೆ ಹೆಚ್ಚಾಗಿ ಕಾರು, ಬೈಕ್ ಗಳ ಬಗ್ಗೆ ಕ್ರೇಜ್ ಹೆಚ್ಚು. ಅದೇ ರೀತಿ ಇದೀಗ ಟಾಲಿವುಡ್ ನಟ ಜೂನಿಯರ್ ಎನ್ ಟಿಆರ್ ಅವರಿಗೂ ಕೂಡ ಕಾರಿನ ಬಗ್ಗೆ ಕ್ರೇಜ್ ಉಂಟಾಗಿದ್ದು, ಅದಕ್ಕಾಗಿ ಇತ್ತೀಚೆಗೆ ಅವರು ಒಂದು ಐಷರಾಮಿ ಕಾರೊಂದನ್ನು ಖರೀದಿಸಿ ತಮ್ಮ ನೆಚ್ಚಿನ ಗೆಳೆಯ ಟಾಲಿವುಡ್ ನ ನಟರೊಬ್ಬರನ್ನು ಭೇಟಿ ಮಾಡಲು ಹೋಗಿದ್ದಾರಂತೆ.

ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಅವರು ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹಾಗಾಗಿ ಅವರಿಬ್ಬರು ಈಗ ಉತ್ತಮ ಸ್ನೇಹಿತರಾಗಿದ್ದಾರೆ. ಹಾಗಾಗಿ ಇತ್ತೀಚೆಗೆ ಜೂನಿಯರ್ ಎನ್ ಟಿ ಆರ್ ಅವರು ಹೊಸ ಸ್ಟೈಲಿಶ್ ಕಾರು ಲಂಬೋರ್ಘಿನಿ ಯನ್ನು ಖರೀದಿಸಿ ನೇರವಾಗಿ ರಾಮ್ ಚರಣ್ ಅವರ ಮನೆಗೆ ಭೇಟಿ ನೀಡಿದ್ದಾರಂತೆ. ಬಹುಶಃ ಇಬ್ಬರು ಸೇರಿ ಈ ಸಂಭ್ರಮವನ್ನು ಸೆಲೆಬ್ರೆಟ್ ಮಾಡಲು ಜೊತೆ ಸೇರಿರಬಹುದು ಎನ್ನಲಾಗಿದೆ.

ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಅವರು ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಡಿವಿವಿ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ದಾನಯ್ಯ ನಿರ್ಮಿಸಿದ್ದಾರೆ. ಆಲಿಯಾಭಟ್, ಒಲಿವಿಯಾ ಮೋರಿಸ್, ಅಜಯ್ ದೇವಗನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button