Latestಮನರಂಜನೆಸಿನಿಮಾಸೆಲೆಬ್ರಿಟಿ

ಸುದೀಪ್ ಸಿನಿ ಜರ್ನಿಗೆ 26 ವರ್ಷ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ವಿಲ್ವರ್ ಸ್ಕ್ರೀನ್ ಜೊತೆಗೆ ಸ್ಮಾಲ್ ಸ್ಕ್ರೀನ್​ನಲ್ಲೂ ಸದ್ದು ಮಾಡ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಕಿಚ್ಚ ಖ್ಯಾತಿ ಘಳಿಸಿದ್ದು ಸುದೀಪ್ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿರ್ತಾರೆ. ಸುದೀಪ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 26 ವರ್ಷ ಕಳೆದಿದ್ದು ಇದನ್ನ ಸೋಷಿನಲ್ ಮೀಡಿಯಾದಲ್ಲಿ ಸುದೀಪ್ ಬರೆದುಕೊಂಡಿದ್ದಾರೆ. ಅಲ್ಲದೆ ಕರ್ನಾಟಕ ಟ್ರೆಂಡ್​ನಲ್ಲಿ #26yearsofsudeepism ಹ್ಯಾಶ್ ಟ್ಯಾಗ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

1997ರಲ್ಲಿ ತೆರೆಕಂಡ ತಾಯವ್ವ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸುದೀಪ್​ಗೆ ಖ್ಯಾತಿ ತಂದುಕೊಟ್ಟಿದ್ದು 2000 ಬಿಡುಗಡೆಯಾದ ಸ್ವರ್ಶ ಸಿನಿಮಾ. ಈ ಚಿತ್ರದಲ್ಲಿ ಸುದೀಪ್​ಗೆ ಜೋಡಿಯಾಗಿ ನಟಿ ರೇಖಾ ಬಣ್ಣ ಹಚ್ಚಿದ್ದು ಇಬ್ಬರಿಗೂ ಈ ಸಿನಿಮಾ ಸಾಕಷ್ಟು ಖ್ಯಾತಿ ತಂದುಕೊಟ್ಟಿತು. ಈ ಚಿತ್ರದ ಬಳಿಕ ಸುದೀಪ್ ನಟನೆಯ ಹುಚ್ಚ, ವಾಲಿ, ಚಂದು, ಕಿಚ್ಚ ಹೀಗೆ ಸಾಲು ಸಾಲು ಸಿನಿಮಾಗಳು ತೆರೆಗೆ ಬಂದವು.

2008ರಲ್ಲಿ ರಾಮ್​ಗೋಪಾಲ್ ವರ್ಮಾ ನಿರ್ದೇಶನದ ಫೂಂಕ್ ಚಿತ್ರದ ಮೂಲಕ ಸುದೀಪ್ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ರು. ನಂತರ ತೆಲುಗಿನ ರಕ್ತಚರಿತ, ಈಗ ಬಾಹುಬಲಿ ಸಲ್ಮಾನ್ ಖಾನ್ ನಟನೆಯ ಹಿಂದಿಯ ದಬಾಂಗ್ 3 ಹೀಗೆ ಪರಭಾಷೆಯ ಸಾಕಷ್ಟು ಸಿನಿಮಾಗಳಲ್ಲೂ ಕಿಚ್ಚ ಛಾಪೂ ಮೂಡಿಸಿದ್ದಾರೆ.

ಸುದೀಪ್ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು 26 ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟ ಮಂದಿ ಸುದೀಪ್​​ಗೆ ಶುಭಾಷಯ ಕೋರಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button