Breaking NewsLatestಕೊಡಗುಜಿಲ್ಲಾ ಸುದ್ದಿ

ರಜಪೂತ್ ರೈಫಲ್ಸ್ ಮುಖ್ಯಸ್ಥರಾಗಿ ಕೊಡಗು ಮೂಲದ ಲೆಫ್ಟಿನೆಂಟ್‌ ಜನರಲ್‌ ಕಾರ್ಯಪ್ಪ

ಕೊಡಗು : ಕೊಡಗು ಮೂಲದ ಭಾರತೀಯ ಸೇನೆಯಲ್ಲಿ ಪ್ರಸ್ತುತ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಕೋದಂಡ ಪಿ.ಕಾರ್ಯಪ್ಪ (ಎವಿಎಸ್ಎಂ) ಅವರ ಇದೀಗ ರಜಪೂತ್ ರೈಫಲ್ಸ್ ವಿಭಾಗದ ಮುಖ್ಯಸ್ಥರಾಗಿಯೂ ನೇಮಕಗೊಂಡಿದ್ದಾರೆ.

ಇವರು ಇದೀಗ ಸೇವೆಯಿಂದ ನಿವೃತ್ತರಾಗುತ್ತಿರುವ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್.ದಿಲ್ಲೋನ್ ಅವರಿಂದ ಅಧಿಕಾರ ಸ್ವೀಕರಿಸಿದರು. ಲೆ.ಜ.ಕಾರ್ಯಪ್ಪ ಅವರು ಈಗಾಗಲೇ ಭಾರತೀಯ ಸೇನೆಯ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥರಾಗಿಯೂ (ಎಂ.ಜಿ.ಎಸ್) ಅಧಿಕಾರದಲ್ಲಿದ್ದಾರೆ. ಇವರು ಇದೀಗ ಸೇವೆಯಿಂದ ನಿವೃತ್ತರಾಗುತ್ತಿರುವ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್.ದಿಲ್ಲೋನ್ ಅವರಿಂದ ಅಧಿಕಾರ ಸ್ವೀಕರಿಸಿದರು.

ಲೆ.ಜ.ಕಾರ್ಯಪ್ಪ ಅವರು ಭಾರತೀಯ ಸೇನೆಯ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದು ಇದರೊಂದಿಗೆ ಹೊಸ ಜವಾಬ್ದಾರಿ ಸಹ ಹೆಗಲೇರಿದ್ದು, ಇವರಿಂದ ಕೊಡಗಿನ ಸೇನಾ ಇತಿಹಾಸಕ್ಕೆ ಮತ್ತಷ್ಟು ಗರಿ ತಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button