Latestಮನರಂಜನೆಸಿನಿಮಾಸೆಲೆಬ್ರಿಟಿ

ಕನ್ನಡದ ನಟಿಯರಿಗೆ ಅವಕಾಶ ಕೊಡಿ: ಶಿವರಾಜ್ ಕುಮಾರ್

ಸಿನಿಮಾಗಳಿಗೆ ಪರಭಾಷೆಯ ನಟಿಯರನ್ನ ಕರೆತಂದ್ರೆ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ ಅನ್ನೋ ಕಲ್ಪನೆ ಕೆಲ ನಿರ್ದೇಶಕರಲ್ಲಿದೆ. ಹೀಗಾಗಿ ಬೇರೆ ಭಾಷೆಯ ನಟಿಯರು ಕೇಳಿದಷ್ಟು ಸಂಭಾವನೆ ಕೊಟ್ಟು ಕರೆಸಿಕೊಳ್ಳುತ್ತಾರೆ. ಆದ್ರೆ ನಮ್ಮಲ್ಲೇ ಪ್ರತಿಭಾವಂತ ನಟಿಯರಿರುವಾಗ ಬೇರೆ ಭಾಷೆಯವ್ರು ಯಾಕೆ ಬೇಕು ಅನ್ನೋದು ಅದೆಷ್ಟೋ ಮಂದಿ ಕೇಳೋ ಪ್ರಶ್ನೆ. ಇದೀಗ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಕೂಡ ಅದೇ ಮಾತನ್ನ ಹೇಳಿದ್ದಾರೆ.

ದುನಿಯಾ ವಿಜಯ್ ನಟನೆಯ ಸಲಗ ಸಕ್ಸಸ್​ ಮೀಟ್ ನಲ್ಲಿ ಭಾಗಿಯಾಗಿದ್ದ ಶಿವಣ್ಣ ಪರಭಾಷೆಯ ನಟಿಯರಿಗೆ ಮಣೆ ಹಾಕೋ ನಿರ್ದೇಶಕರಿಗೆ ಕಿವಿ ಮಾತೊಂದನ್ನ ಹೇಳಿದ್ದಾರೆ. ನಮ್ಮಲ್ಲೇ ಒಳ್ಳೊಳ್ಳೆ ನಟಿಯರಿದ್ದಾರೆ. ಎಲ್ಲರಿಗೂ ಹೇಳೋದೇನು ಅಂದ್ರೆ ಕನ್ನಡದ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಸಲಗ ಸಿನಿಮಾದ ಬಗ್ಗೆ ಮಾತನಾಡಿದ ಶಿವಣ್ಣ ನಾವು ಒಟ್ಟಿಗೆ ಇದ್ದಾಗ ನಮಗೆ ವಯಸ್ಸಾಗಿದೆ ಅನ್ಕೋಳ್ಳೋದಿಲ್ಲ. ನಾವು ಪಾಸಿಟಿವ್ ಥಿಂಗ್ ಮಾಡಬೇಕು. ಅದೇ ಒಳ್ಳೆಯದು. ವಿಜಿ ಮೊದಲ ಸಿನಿಮಾ ದುನಿಯಾ ಮುಹೂರ್ತಕ್ಕೆ ಬಂದಿದ್ದೆ. ಈಗಲೂ ಜೊತೆ ಇದ್ದೀನಿ ಎಂದರು.

ಇದೇ ವೇಳೆ ಅಪ್ಪು ನೆನೆದು ಶಿವಣ್ಣ ಭಾವುಕರಾದರು. ಸಲಗ ಪ್ರೀ ರಿಲೀಸ್ ಇವೆಂಟ್ ಯಾವಾಗ್ಲೂ ನೆನಪಿರುತ್ತೆ. ಅಪ್ಪು ನಾನು ಇದ್ವಿ. ಹಲವು ನೆನಪುಗಳಿವೆ. ಈಗಿಲ್ಲ ಅಂತ ಅನ್ಕೊಂಡ್ರೆ ತುಂಬಾ ಕಷ್ಟ ಆಗುತ್ತೆ. ಆದರೆ ಅವರು ಇಲ್ಲೇ ಇದ್ದಾರೆ. ಅವರ ಬ್ಲೆಸಿಂಗ್ಸ್ ಯಾವಾಗ್ಲು ಇರುತ್ತೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button