ಮನರಂಜನೆಸಿನಿಮಾಸೆಲೆಬ್ರಿಟಿ

ಬಾಲಾಜಿ ಮೀಡಿಯಾ ಕಚೇರಿಗೆ ಭೇಟಿ ನೀಡಿದ ಪ್ರೇಮಂ ಪೂಜ್ಯಂ ಚಿತ್ರ ತಂಡ

ನಟ ಲವ್ಲಿ ಸ್ಟಾರ್ ಪ್ರೇಂ ನಾಯಕನಾಗಿ ನಟಿಸಿರುವ ಪ್ರೇಮಂ ಪೂಜ್ಯಂ ಚಿತ್ರ ನವೆಂಬರ್ 12 (ಶುಕ್ರವಾರ) ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಬಾಲಾಜಿ ಮೀಡಿಯ ಗ್ರೂಪ್​​ ಸೋದರ ಸಂಸ್ಥೆಯಾದ ನಮ್​​​​​​ ರೆಡಿಯೋ ಕಚೇರಿಗೆ ಪ್ರೇಮಂ ಪೂಜ್ಯಂ ಚಿತ್ರ ತಂಡ ಭೇಟಿ ನೀಡಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ನಾಯಕ ನಟ ಪ್ರೇಮ್ ಮಾತನಾಡಿ, ಪ್ರೇಮಂ ಪೂಜ್ಯಂ ಚಿತ್ರವನ್ನು ಡಾ ರಾಘವೇಂದ್ರ ಬಿ.ಎಸ್ ನಿರ್ದೇಶಿಸುವುದರ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು, ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಸಹ ಮಾಡಿದ್ದಾರೆ.

ಈ ಚಿತ್ರ ಪ್ರೇಮ್ ಅವರ 25 ನೇ ಚಿತ್ರವಾಗಿದೆ. ಊಟಿ, ಪೂನಾ, ಚಿಕ್ಕಮಗಳೂರು, ಮಳವಳ್ಳಿ, ಮಂಡ್ಯ, ಧರ್ಮಶಾಲಾ, ವಿಯೆಟ್ನಾಂ ಇತರೆ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಡಾ. ರಾಘವೇಂದ್ರ ಎಂಬುವವರು ಈ ಚಿತ್ರವನ್ನು ನಿರ್ದೇಶನವನ್ನು ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಡಾ ರಾಘವೇಂದ್ರ ಮಾತನಾಡಿ, ವೃತ್ತಿಯಲ್ಲಿ ವೈದ್ಯನಾಗಿ ತಮಗೆ ತೃಪ್ತಿ ಇದ್ದರೂ ಚಲನ ಚಿತ್ರ ನಿರ್ಮಾಣ, ಚಿತ್ರಕಥೆ, ಸಂಭಾಷಣೆ ಬರೆಯುವ ಬಗ್ಗೆ ಮೊದಲಿನಿಂದಲೂ ಒಲವಿತ್ತು. ಮಾಸ್ಟರ್ ಆನಂದ್ ಅವರು ಬೆಂಬಲಕ್ಕೆ ನಿಂತು ಹುರಿದುಂಬಿಸಿದ ಪರಿಣಾಮ ಮೊದಲ ಚಿತ್ರ ಪ್ರೇಮಂ ಪೂಜ್ಯಂ ನಿರ್ದೇಶಿಸಿದ್ದೇನೆ ಎಂದರು.

ಚಿತ್ರದಲ್ಲಿ 12 ಹಾಡುಗಳಿವೆ. ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದು, ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್, ಸಾಧು ಕೋಕಿಲಾ, ಅನು ಪ್ರಭಾಕರ್, ತಪಸ್ವಿನಿ ಸೇರಿದಂತೆ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಸಹ ತೆರೆ ಹಂಚಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button